ಅಪಾಯಕಾರಿ ಕ್ರೀಡೆ; ಒಲಿಂಪಿಕ್ಸ್ನಿಂದ ಕುಸ್ತಿ ಹೊರಕ್ಕೆ
ಕುಸ್ತಿಯನ್ನು ಹೆಚ್ಚು ಅಪಾಯಕಾರಿ ಕ್ರೀಡೆಯಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 2020ರ ಒಲಿಂಪಿಕ್ಸ್ ನಿಂದ ಕುಸ್ತಿಯನ್ನು ಕೈ ಬಿಟ್ಟಿದೆ.
ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ನಿಂದ ಕುಸ್ತಿ ಪಂದ್ಯವನ್ನು ಕೈ ಬಿಡಲಾಗಿದೆ. ಕುಸ್ತಿಯನ್ನು ಹೆಚ್ಚು ಅಪಾಯಕಾರಿ ಕ್ರೀಡೆಯಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 2020ರ ಒಲಿಂಪಿಕ್ಸ್ ನಿಂದ ಕುಸ್ತಿಯನ್ನು ಕೈ ಬಿಟ್ಟಿದೆ.
ಇಂದು ನಡೆದ ಒಲಿಂಪಿಕ್ಸ್ ಕಾರ್ಯಕಾರಿ ಸಮಿತಿಯಲ್ಲಿ ಆಧುನಿಕ ಪಂಚಕ್ರೀಡಾ ಪಂದ್ಯಗಳನ್ನು ಪಟ್ಟಿಮಾಡಲಾಯಿತು. ಈ ಪಟ್ಟಿಯಲ್ಲಿ ಹೆಚ್ಚು ಅಪಾಯವಿರುವ ಕ್ರೀಡೆಗಳನ್ನು ಪಟ್ಟಿ ಮಾಡಿ, ಅತಿ ಹೆಚ್ಚು ಅಪಾಯಕಾರಿ ಕ್ರೀಡೆ ಎಂದು ಕುಸ್ತಿಯನ್ನು ಪರಿಗಣಿಸಲಾಯಿತು.
ಸದ್ಯ ಒಲಿಂಪಿಕ್ಸ್ 26 ಕ್ರೀಡೆಗಳನ್ನು ಒಳಗೊಂಡಿದೆ. ಈ ಹಿಂದೆ ನಡೆದ ಒಲಿಂಪಿಕ್ಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೆಚ್ಚು ಅಪಾಯವಿರುವ ಕ್ರೀಡೆಯನ್ನು ಒಲಿಂಪಿಕ್ಸ್ನಿಂದ ಕೈ ಬಿಡಲು ಮತ್ತು ಹೊಸ ಕ್ರೀಡೆಯೊಂದನ್ನು ಸೇರಿಸಲು ನಿರ್ಧರಿಸಲಾಗಿತ್ತು. ಅದರಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ನಿಂದ ಕುಸ್ತಿಯನ್ನು ಕೈ ಬಿಡಲಾಗಿದೆ. ಅಲ್ಲದೆ ಮುಂದಿನ ವರ್ಷ ನಡೆಯುವ ಸಭೆಯಲ್ಲಿ ಹೊಸ ಕ್ರೀಡೆಯನ್ನು ಒಲಿಂಪಿಕ್ಸ್ ಕ್ರೀಡಾ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕು ಎನ್ನುವ ಕುಸ್ತಿ ಪಟುಗಳ ಕನಸು ಇನ್ನು ಮುಂದೆ ಕನಸಾಗಿಯೇ ಉಳಿಯಲಿದೆ.