ಅಫ್ಜಲ್ಗೆ ಗಲ್ಲು: ನಾಲ್ಕನೇ ದಿನವೂ ಮುಂದುವರಿದ ಕರ್ಫ್ಯೂ
ಉಗ್ರ ಅಫ್ಜಲ್ ಗುರುವನ್ನು ನೇಣಿಗೇರಿಸಿದ ನಂತರ ಪ್ರಕ್ಷುಬ್ಧವಾಗಿದ್ದ ಕಾಶ್ಮೀರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ನಾಲ್ಕನೇ ದಿನವೂ ಮುಂದುವರಿಸಲಾಗಿದೆ.
ಶ್ರೀನಗರ: ಉಗ್ರ ಅಫ್ಜಲ್ ಗುರುವನ್ನು ನೇಣಿಗೇರಿಸಿದ ನಂತರ ಪ್ರಕ್ಷುಬ್ಧವಾಗಿದ್ದ ಕಾಶ್ಮೀರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ನಾಲ್ಕನೇ ದಿನವೂ ಮುಂದುವರಿಸಲಾಗಿದೆ.
ಸಂಸತ್ ಮೇಲಿನ ದಾಳಿಗೆ ಪ್ರಧಾನ ಸೂತ್ರದಾರನಾಗಿದ್ದ ಉಗ್ರ ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದಕ್ಕಾಗಿ ಪ್ರಕ್ಷುಬ್ಧಗೊಂಡಿದ್ದ ಕಾಶ್ಮೀರ ಕಣಿವೆಯಲ್ಲಿ ಇಂದೂ ಕರ್ಫ್ಯೂವನ್ನು ಮುಂದುವರೆಲಾಗಿದೆ. ಅಲ್ಲದೆ ಅಫ್ಜಲ್ ಗುರುವಿನ ಮನೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಕಲ್ಲುತೂರಾಟದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ನಿನ್ನೆ ಕಾಶ್ಮೀರ ಕಣಿವೆ ಬಹುತೇಕ ಶಾಂತಿಯುತವಾಗಿತ್ತು. ಅಲ್ಲದೆ ಕಾಶ್ಮೀರದಾದ್ಯಂತ ಕೇಬಲ್, ಇಂಟರ್ನೆಟ್, ಮೊಬೈಲ್ ಕನೆಕ್ಷನ್ಗಳ ಮೇಲೆ ವಿಧಿಸಿರುವ ನಿಷೇಧವನ್ನು ಇಂದೂ ಸಹ ಮುಂದುವರೆಸಲಾಗಿದೆ.
ಒಟ್ಟಾರೆ ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದ ನಂತರ ಅಶಾಂತಿಗೆ ತುತ್ತಾಗಿದ್ದ ಕಾಶ್ಮೀರ ಕ್ರಮೇಣ ಸಹಜ ಸ್ಥಿತಿಯತ್ತ ಮುಖ ಮಾಡಿದೆ.