ಪ್ರೇಯಸಿ ಹತ್ಯೆ: 'ಬ್ಲೇಡ್ ರನ್ನರ್' ಅರೆಸ್ಟ್
ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದು 'ಬ್ಲೇಡ್ ರನ್ನರ್' ಎಂದು ಖ್ಯಾತಿಗಳಿಸಿದ್ದ ಅಥ್ಲೀಟ್, ಆಸ್ಕರ್ ಪಿಸ್ಟೋರಿಯಸ್ನನ್ನು ಪೊಲೀಸರು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.
ಜೋಹನ್ಸ್ಬರ್ಗ್: ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದು 'ಬ್ಲೇಡ್ ರನ್ನರ್' ಎಂದು ಖ್ಯಾತಿಗಳಿಸಿದ್ದ ಅಥ್ಲೀಟ್, ಆಸ್ಕರ್ ಪಿಸ್ಟೋರಿಯಸ್ನನ್ನು ಪೊಲೀಸರು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.
2012 ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ "ಬ್ಲೇಡ್ ರನ್ನರ್' ಎಂದೇ ಖ್ಯಾತಿ ಗಳಿಸಿದ್ದ ದ.ಆಫ್ರಿಕಾ ಮೂಲದ ಆಸ್ಕರ್ ಪಿಸ್ಟೋರಿಯಸ್, ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಜೊಹಾನ್ಸ್ಬರ್ಗ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ತನ್ನ ಪ್ರಿಯತಮೆಯ ಮೇಲೆ ಸಂಶಯ ಪಟ್ಟ ಪಿಸ್ಟೋರಿಯಸ್, ತನ್ನ ಪರವಾನಗಿ ಇರುವ ಪಿಸ್ತೂಲ್ನಿಂದ ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಬಾಲ್ಯದಲ್ಲಿಯೇ ತನ್ನ ಎರಡೂ ಕಾಲುಗಳನ್ನು ಕಳೆದು ಕೊಂಡಿದ್ದ ಪಿಸ್ಟೋರಿಯಸ್, ತನ್ನ ಕಾಲುಗಳಿಗೆ ಫೈಬರ್ ಬ್ಲೇಡ್ಗಳನ್ನು ಧರಿಸಿ ನಡೆದಾಡುತ್ತಿದ್ದನು. 2012ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀ ರಿಲೇ ಪಂದ್ಯದಲ್ಲಿ ಪಾಲ್ಗೊಂಡಿದ್ದ ಪಿಸ್ಟೋರಿಯಸ್, ದಾಖಲೆ ಸಮಯದಲ್ಲಿ ಓಡಿ ಚಿನ್ನದ ಪದಕ ಗೆದ್ದು ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ್ದ. ಅಲ್ಲದೆ 2012ರಲ್ಲಿ ಟೈಮ್ಸ್ ಮ್ಯಾಗಜಿನ್ ನಡೆಸಿದ '100 ಪ್ರಭಾವಿ ಕ್ರೀಡಾಪಟು'ಗಳ ಪಟ್ಟಿಯಲ್ಲಿ ಪಿಸ್ಚೋರಿಯಸ್ ಸ್ಥಾನ ಗಳಿಸಿದ್ದನು.