ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜ್ಯ ಬಜೆಟ್‌ಗೆ ಹೊಸ ಅಂಶಗಳ ಸೇರ್ಪಡೆ

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 2013-14ನೇ ಸಾಲಿನ ಬಜೆಟ್‌ಗೆ ಹಲವು ಹೊಸ ಅಂಶಗಳನ್ನು ಸೇರ್ಪಡೆ ಮಾಡಿದ್ದಾರೆ.

Srinivasa Murthy VN
Updated On : 14 Feb 2013, 7:10 am

ಬೆಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 2013-14ನೇ ಸಾಲಿನ ಬಜೆಟ್‌ಗೆ ಹಲವು ಹೊಸ ಅಂಶಗಳನ್ನು ಸೇರ್ಪಡೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಾವು ಮಂಡಿಸಿದ್ದ ಬಜೆಟ್‌ಗೆ ಹೊಸ ಅಂಶಗಳನ್ನು ಸೇರಿಸಿದರು. ಇತ್ತೀಚೆಗಷ್ಟೇ ದೈವಾಧೀನರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆದಿಚುಂಚನಗಿರಿ ಮಠಕ್ಕೆ 5 ಕೋಟಿಗಳ ಅನುದಾನ ಸೇರಿದಂತೆ ದೈವಜ್ಞ ಬ್ರಾಹ್ಮಣ ಮಠಕ್ಕೆ 2 ಕೋಟಿ ರುಪಾಯಿ, ಉತ್ತರಾಧಿ ಮಠಕ್ಕೆ 2 ಕೋಟಿ, ಕೊಪ್ಪಳದ ಗವಿ ಮಠಕ್ಕೆ 2 ಕೋಟಿ ರುಪಾಯಿ ಅನುದಾನ ಸೇರಿದಂತೆ ರಾಜ್ಯದ ಒಟ್ಟು 20 ಕ್ಕೂ ಹೆಚ್ಚು ಮಠಗಳಿಗೆ ಅನುದಾನ ನೀಡಿದ್ದಾರೆ. ಪಂಡರಾಪುರ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗಾಗಿ ಪಂಡಾರಾಪುರದಲ್ಲಿ ಯಾತ್ರಿ ನಿವಾಸ ನಿರ್ಮಿಸಲು 2 ಕೋಟಿ ರುಪಾಯಿ ಧನಸಹಾಯ ಘೋಷಿಸಿದರು.

ಕೊಡುಗು ಜಿಲ್ಲೆಯ ರಸ್ತೆಯ ಅಭಿವೃದ್ಧಿಗೆ 25 ಕೋಟಿ ಮತ್ತು ರಾಜ್ಯದ ಕೈಗಾರಿಕಾ ಮೂಲ ಸೌಕರ್ಯಕ್ಕಾಗಿ 300 ಕೋಟಿ ರು.ಗಳನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ ರಾಜ್ಯದ ನೇಕಾರ ಮತ್ತು ಮೀನುಗಾರರ ಸಾಲ ಮನ್ನಾ ಮಾಡುವ ಪ್ರಸ್ತಾಪಕ್ಕೂ ಸಿಎಂ ಜಗದೀಶ್ ಶೆಟ್ಟರ್ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಮತ್ತು ಜಲ ಸಂವರ್ಧನೆಗೆ 100 ಕೋಟಿ ರು.ಗಳನ್ನು ಮೀಸಲಿಟ್ಟಿರುವ ಶೆಟ್ಟರ್ ಅವರು, ಬಜೆಟ್‌ನಲ್ಲಿ ನಗು-ಮಗು ಎಂಬ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ ಬಡ ಮಕ್ಕಳಿಗೆ ಉಚಿತ ನ್ಯಾಪ್ಕಿನ್‌ಗಳನ್ನು ವಿತರಿಸಲು ಶೆಟ್ಟರ್ ಮುಂದಾಗಿದ್ದಾರೆ.

ಶೆಟ್ಟರ್ ಅವರ ಹೆಚ್ಚುವರಿ ಬಜೆಟ್ ಅನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆದರೆ ಶೆಟ್ಟರ್ ಅವರ ಬಜೆಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು. ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಅನುಪಸ್ಥಿತಿಯಲ್ಲಿ ಶೆಟ್ಟರ್ ಅವರು ಹೆಚ್ಚುವರಿ ಬಜೆಟ್ ಅನ್ನು ಅಂಗೀಕರಿಸಲಾಯಿತು.

ಒಟ್ಟಾರೆ ಜಗದೀಶ್ ಶೆಟ್ಟರ್ ಅವರು ಇಂದು ಮಂಡಿಸಿದ 'ಹೆಚ್ಚುವರಿ ಬಜೆಟ್‌'ನಲ್ಲಿಯೂ ಮಠಗಳ ಮೇಲಿನ ಪ್ರೀತಿಯನ್ನು ಮೆರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement