ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೂರ್ಯಾನೆಲ್ಲಿ ಪ್ರಕರಣ: ಸೋನಿಯಾ, ಕುರಿಯನ್ ಭೇಟಿ

ಕೇರಳ ರಾಜ್ಯಸಭಾ ಉಪಾಧ್ಯಕ್ಷ ಪಿಜೆ ಕುರಿಯನ್ ಅವರು ಗುರುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.

Srinivasa Murthy VN
Updated On : 14 Feb 2013, 5:04 am

ನವದೆಹಲಿ: ಕೇರಳ ರಾಜ್ಯಸಭಾ ಉಪಾಧ್ಯಕ್ಷ ಪಿಜೆ ಕುರಿಯನ್ ಅವರು ಗುರುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.

ನವದೆಹಲಿಯ ಸೋನಿಯಾ ನಿವಾಸಕ್ಕೆ ತೆರಳಿದ್ದ ಕುರಿಯನ್ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಸೂರ್ಯಾನೆಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಕುರಿಯನ್ ಅವರು ಇಂದು ಸೋನಿಯಾಗಾಂಧಿ ಅವರೊಂದಿಗೆ ತಮ್ಮ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮ ರಾಜ್ಯಸಭಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಕುರಿತು ಅವರು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಜೆ ಕುರಿಯನ್ ಕುರಿತಂತೆ ಸ್ವತಃ ಕೇರಳ ಕಾಂಗ್ರೆಸ್ ವಲಯದಲ್ಲಿಯೇ ಟೀಕೆಗಳು ಕೇಳಿಬಂದಿದೆ. ಅಲ್ಲದೆ ರಾಜ್ಯಸಭೆಯಲ್ಲಿಯೂ ಕುರಿಯನ್ ವಿರುದ್ದ ಪ್ರತಿಪಕ್ಷಗಳು ಟೀಕಾಪ್ರಹಾರವನ್ನೇ ಮಾಡುತ್ತಿರುವುದು ಅವರ ಈ ನಿರ್ಧಾರಕ್ಕೆ ಕಾರಣವೆಂದು ತಿಳಿದುಬಂದಿದೆ.

ಚರ್ಚೆ ಬಳಿಕೆ ಹೊರ ಬಂದ ಕುರಿಯನ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದರು. 'ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಸೋನಿಯಾ ಮತ್ತು ತಮ್ಮ ಭೇಟಿಯ ವಿಚಾರ ಮಾಧ್ಯಮಗಳಿಗೆ ಅಲ್ಲ. ಹಾಗಾಗಿ ಅದನ್ನು ಬಹಿರಂಗಪಡಿಸಲು ನಾನು ಇಚ್ಚಿಸುವುದಿಲ್ಲ' ಎಂದು ಕುರಿಯನ್ ಹೇಳಿದರು.

ಕೇರಳದ ಹಿರಿಯ ರಾಜಕಾರಣಿ ಕುರಿಯನ್ ಅವರು ಸೂರ್ಯಾನೆಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ತಮ್ಮ ಸ್ಥಾನವನ್ನು ತೊರೆಯಲು ಇಚ್ಚಿಸಿರುವ ಅವರು ಈ ಬಗ್ಗೆ ನಿನ್ನೆಯೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement