ಕೆಆರ್ಎಸ್ ಸುತ್ತ ನಾಳೆಯಿಂದ ನಿಷೇಧಾಜ್ಞೆ ಜಾರಿ
ಮಂಡ್ಯದ ಕೃಷ್ಮರಾಜ ಸಾಗರ ಅಣೆಕಟ್ಟು ಸುತ್ತಮುತ್ತಲಿನ ಪ್ರದೇಶದಲ್ಲಿ ನಾಳೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೈಸೂರು: ಮಂಡ್ಯದ ಕೃಷ್ಮರಾಜ ಸಾಗರ ಅಣೆಕಟ್ಟು ಸುತ್ತಮುತ್ತಲಿನ ಪ್ರದೇಶದಲ್ಲಿ ನಾಳೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ವಿಚಾರದ ಕುರಿತು ಇಡೀ ರಾಜ್ಯವೇ ಸುಪ್ರೀಂಕೋರ್ಟ್ನತ್ತ ಮುಖ ಮಾಡಿರುವ ಈ ಹೊತ್ತಿನಲ್ಲಿ ಕೆಆರ್ಎಸ್ ಅಣೆಕಟ್ಟು ಸುತ್ತಮುತ್ತಲ ಸುಮಾರು 3 ಕಿಮೀ ವ್ಯಾಪ್ತಿಯಲ್ಲಿ 4 ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಪಾಂಡವಪುರದ ಸಹಾಯಕ ಜಿಲ್ಲಾಧಿಕಾರಿ ಲತಾ ಅವರು ನಿಷೇಧಾಜ್ಞೆ ಹೇರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಾಳೆಯಿಂದ ಅಂದರೆ ಫೆ.16 ರಿಂದ 20ರವರೆಗೆ ಅಣೆಕಟ್ಟೆಯ ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.