ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮತ್ತೆ ಕಾಲು ಕೆರೆದ ಪಾಕ್: ಪಾಕ್ ಸೈನಿಕನ ಹತ್ಯೆ

ಭಾರತ ಮತ್ತು ಪಾಕ್ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಯೋಧರು ಪಾಕಿಸ್ತಾನದ ಸೈನಿಕನೊಬ್ಬನನ್ನು ಹೊಡೆದುರುಳಿಸಿದ್ದಾರೆ.

Srinivasa Murthy VN
Updated On : 15 Feb 2013, 4:11 am

ಶ್ರೀನಗರ: ಭಾರತ ಮತ್ತು ಪಾಕ್ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಯೋಧರು ಪಾಕಿಸ್ತಾನದ ಸೈನಿಕನೊಬ್ಬನನ್ನು ಹೊಡೆದುರುಳಿಸಿದ್ದಾರೆ.

ಭಾರತ ಮತ್ತು ಪಾಕ್ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೇ ಕಾಲು ಕೆರೆದು ಭಾರತೀಯ ಯೋಧರನ್ನು ಕೆಣಕುತ್ತಿದ್ದಾರೆ. ಇಂದು ಕಾಶ್ಮೀರದ ಖೋಯ್ ರಟ್ಟಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಗಡಿಯನ್ನು ದಾಟಿ ಒಳನುಸುಳಲು ಯತ್ನಿಸಿದ ಓರ್ವ ಪಾಕ್ ಯೋಧನನ್ನು ಭಾರತೀಯ ಯೋಧರು ಗುಂಡಿಕ್ಕಿ ಕೊಂದುಹಾಕಿದ್ದಾರೆ.

ಗುರುವಾರ ಮಧ್ಯಾಹ್ನವೇ ಘಟನೆ ಜರುಗಿದ್ದು, ಮಾಧ್ಯಮಗಳಿಗೆ ತಡವಾಗಿ ತಿಳಿದು ಬಂದಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಸೈನಿಕ ಮುಖ್ಯಸ್ಥರು ಎಂದಿನಂತೆ ಭಾರತದತ್ತ ಬೊಟ್ಟು ಮಾಡಿ ತೊರಿಸುತ್ತಿದ್ದಾರೆ. ತಮ್ಮ ಸೈನಿಕ ಪ್ರಮಾದವಶಾತ್ ಭಾರತದ ಗಡಿ ಪ್ರವೇಶ ಮಾಡಿದ್ದನು. ಆದರೆ ಭಾರತದ ಸೈನಿಕರು ನಿರ್ದಾಕ್ಷಿಣ್ಯವಾಗಿ ಅವನನ್ನು ಕೊಂದುಹಾಕಿದ್ದಾರೆ ಎಂದು ಆರೋಪಿಸಿದೆ. ಈ ಕುರಿತು ಭಾರತೀಯ ಸೈನಿಕ ಮುಖ್ಯಸ್ಥರೊಂದಿಗೆ ಚರ್ಚಿಸಲು ಪ್ರಯತ್ನಿಸುತ್ತೇವೆ ಎಂದು ಪಾಕ್ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

ಒಟ್ಟಾರೆ ಹಿಂದಿನ ಕಹಿಘಟನೆಗಳಿಂದ ಪಾಠ ಕಲಿತಿರುವ ಭಾರತೀಯ ಯೋಧರು, ಮುಂದೆ ಯಾವುದೇ ರೀತಿಯ ಪ್ರಮಾದಗಳಿಗೆ ತಾವು ಅವಕಾಶ ನೀಡುವುದಿಲ್ಲ ಎಂದು ಈ ಮೂಲಕ ಪಾಕ್ ಸೈನಿಕರಿಗೆ ಸ್ಪಷ್ಟಸಂದೇಶ ರವಾನಿಸಿದ್ದಾರೆ. ಅಲ್ಲದೆ ನಾವು ಪಾಕಿಸ್ತಾನ ಸೈನಿಕರಂತೆ ಅಲ್ಲ ಎಂದು ಹೇಳಿರುವ ಭಾರತೀಯ ಯೋಧರು, ಪಾಕ್ ಸೈನಿಕನ ಶವವನ್ನು ಮರಳಿಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement