ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾವೇರಿ ಅಧಿಸೂಚನೆ ಪ್ರಕಟ, 90 ದಿನದಲ್ಲಿ ಆದೇಶ ಜಾರಿ

ರಾಜ್ಯ ಸರ್ಕಾರದ ತೀವ್ರ ವಿರೋಧದ ನಡುವೆಯೂ ಕಾವೇರಿ ನ್ಯಾಯಾಧೀಕರಣದ ಅಂತಿಮ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಬುಧವಾರ ಗೆಜೆಟ್‌ನಲ್ಲಿ ಪ್ರಕಟಿಸಿದೆ.

Lingaraj Badiger
Updated On : 20 Feb 2013, 1:59 am

ನವದೆಹಲಿ: ರಾಜ್ಯ ಸರ್ಕಾರದ ತೀವ್ರ ವಿರೋಧದ ನಡುವೆಯೂ ಕಾವೇರಿ ನ್ಯಾಯಾಧೀಕರಣದ ಅಂತಿಮ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಬುಧವಾರ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಮುಂದಿನ 90 ದಿನಗಳಲ್ಲಿ ಐ ತೀರ್ಪಿನ ಆದೇಶ ಜಾರಿಗೆ ಬರಲಿದೆ.

ಐತೀರ್ಪಿನ ವಿರುದ್ಧ ಕಾವೇರಿ ನದಿ ಪಾತ್ರದ ನಾಲ್ಕು ರಾಜ್ಯಗಳು ಸಲ್ಲಿಸಿರುವ ತಕರಾರು ಮತ್ತು ಸ್ಪಷ್ಟನೆ ಕೋರಿರುವ ಅರ್ಜಿಗಳು ಇತ್ಯರ್ಥವಾಗದೇ ಇದ್ದರೂ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಿದ್ಧಪಡಿಸಿರುವ ಅಧಿಸೂಚನೆ ಭಾರತ ಸರ್ಕಾರದ ಮುದ್ರಣಾಲಯಕ್ಕೆ ನಿನ್ನೆ ರವಾನೆಯಾಗಿತ್ತು. ಇಂದು ಮುದ್ರಿತ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ  ನೀಡಿದೆ.
2007ರಲ್ಲಿ ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿತ್ತು.

ಐತೀರ್ಪಿನಲ್ಲಿರುವ ಪ್ರಮುಖ ಅಂಶಗಳು:

ಸಂಕಷ್ಟ ನಮಗೆ; ಸಮೃದ್ಧಿ ಅವರಿಗೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement