ಯಶೋದಾ ಆಸ್ಪತ್ರೆಯ ಬಳಿ ಜೀವಂತ ಬಾಂಬ್
ಹೈದರಾಬಾದಿನ ದಿಲ್‌ಸುಖ್ ನಗರದ ಯಶೋದಾ ಆಸ್ಪತ್ರೆಯ ಬಳಿ ಜೀವಂತ ಬಾಂಬ್ ಇರುವ ಕುರಿತು ಬಾಂಬ್ ನಿಷ್ಕ್ರಿಯ ದಳ ಸಂಶಯ ವ್ಯಕ್ತಪಡಿಸುತ್ತಿದೆ.
ಹೈದರಾಬಾದ್: ಹೈದರಾಬಾದಿನ ದಿಲ್‌ಸುಖ್ ನಗರದ ಯಶೋದಾ ಆಸ್ಪತ್ರೆಯ ಬಳಿ ಜೀವಂತ ಬಾಂಬ್ ಇರುವ ಕುರಿತು ಬಾಂಬ್ ನಿಷ್ಕಕ್ರಿಯ ದಳ ಸಂಶಯ ವ್ಯಕ್ತಪಡಿಸುತ್ತಿದೆ.
ಹೈದರಾಬಾದಿನ ದಿಲ್‌ಸುಖ್ ನಗರದಲ್ಲಿರುವ ವೆಂಕಟಾದ್ರಿ ಚಿತ್ರ ಮಂದಿರ ಬಳಿಯ ಮೇಲ್ಸೇತುವೆ ಬಳಿ ಜೀವಂತ ಬಾಂಬ್ ಇರುವ ಕುರಿತು ಸಂಶಯ ವ್ಯಕ್ತವಾಗುತ್ತಿದ್ದು, ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆಯಲ್ಲಿ ತೊಡಗಿದೆ.
ಇಲ್ಲಿನ ವೆಂಕಟಾದ್ರಿ ಮತ್ತು ಕೊನಾರ್ಕ್ ಚಿತ್ರಮಂದಿರದ ಬಳಿ ಅವಳಿ ಸ್ಫೋಟ ಸಂಭವಿಸಿ 22 ಜನರು ಸಾವಿಗೀಡಾಗಿರುವ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಇದೇ ಸಮ.ದಲ್ಲಿ ಯಶೋದಾ ಆಸ್ಪತ್ರೆಯ ಬಳಿ ಅಂದರೆ ದಿಲ್‌ಸುಖ್ ನಗರದ ಪಾದಚಾರಿ ಮೇಲ್ಸೇತುವೆ ಬಳಿ ಜೀವಂತ ಬಾಂಬ್ ಪತ್ತೆಯಾಗಿರುವುದು ಹೈದರಾಬಾದ್ ಜನತೆಯನ್ನು ಬೆಚ್ಚಿಬೀಳಿಸಿದೆ.