ಗರ್ಭಿಣಿಯಾಗಿದ್ದ ಪಿಸ್ಟೋರಿಯಸ್ ಗೆಳತಿ..?
ಪ್ಯಾರಾಲಿಂಪಿಕ್ಸ್ ಆಟಗಾರ ಆಸ್ಕರ್ ಪಿಸ್ಟೋರಿಯಸ್ನಿಂದ ಸಾವನ್ನಪ್ಪಿದ್ದ ಆತನ ಗೆಳತಿ ರೀವಾ, ಕೊಲೆಯಾಗುವಾಗ ಗರ್ಭಿಣಿಯಾಗಿದ್ದಳು...
ಜೊಹಾನ್ಸ್ಬರ್ಗ್: ಪ್ಯಾರಾಲಿಂಪಿಕ್ಸ್ ಆಟಗಾರ ಆಸ್ಕರ್ ಪಿಸ್ಟೋರಿಯಸ್ನಿಂದ ಸಾವನ್ನಪ್ಪಿದ್ದ ಆತನ ಗೆಳತಿ ರೀವಾ, ಕೊಲೆಯಾಗುವಾಗ ಗರ್ಭಿಣಿಯಾಗಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿದ್ದ ಆಸ್ಕರ್ ಪಿಸ್ಟೋರಿಯಸ್ನ ಪ್ರೇಯಸಿ ರೀವಾ ಸ್ಟೀನ್ಕಾಂಪ್ ಗರ್ಭಿಣಿಯಾಗಿದ್ದಳು ಎಂದು ಅಮೇರಿಕದ ಡೈಲಿಸ್ಟಾರ್ ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಆಕೆ ಈ ವಿಷಯವನ್ನು ತನ್ನ ಪ್ರಿಯತಮ ಪಿಸ್ಟೋರಿಯಸ್ಗೆ ತಿಳಿಸಲು ಬಂದಾಗ ಆಕೆ ಕೊಲೆಯಾಗಿದ್ದಾಳೆ ಎಂದೂ ಪತ್ರಿಕೆ ತಿಳಿಸಿದೆ.
"ಪಿಸ್ಟೋರಿಯಸ್ನ ಪ್ರೇಯಸಿ ರೀವಾ ಸ್ಟೀನ್ಕಾಂಪ್ ತಾನು ಕೊಲೆಯಾಗುವ ಹಿಂದಿನ ದಿನ ಆರೋಗ್ಯ ತಪಾಸಣೆಗೆ ಒಳಗಾಗಿದ್ದಳು. ಆಕೆಯನ್ನು ಪರೀಕ್ಷಿಸಿದ್ದ ವೈದ್ಯರು ಆಕೆ ಗರ್ಭಿಣಿಯಾದ ವಿಷಯವನ್ನು ತಿಳಿಸಿದ್ದಾರೆ. ವಿಷಯ ತಿಳಿದು ತುಂಬಾ ಸಂತೋಷಗೊಂಡ ಆಕೆ ತನ್ನ ಅಪಾರ್ಟ್ಮೆಂಟ್ನ ವಾಚ್ಮನ್ ಬಳಿ ಈ ವಿಷಯವನ್ನು ಹೇಳಿ ಖುಷಿಪಟ್ಟಿದ್ದಾಳೆ.
ನಂತರ ಈ ವಿಷಯವನ್ನು ತನ್ನ ಗೆಳೆಯ ಪಿಸ್ಟೋರಿಯಸ್ಗೆ ತಿಳಿಸಲು ಕಾತುರಳಾಗಿದ್ದ ಆಕೆ, ಪ್ರೇಮಿಗಳ ದಿನದಂದೇ ವಿಷಯ ತಿಳಿಸಲು ತಡರಾತ್ರಿಯಲ್ಲಿ ಆತನ ಮನೆಗೆ ತೆರಳಿದಾಗ ಕಳ್ಳರೆಂದು ತಿಳಿದ ಪಿಸ್ಟೋರಿಯಸ್ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಎಲ್ಲಾ ವಿಷಯಗಳು ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.