5ನೇ ಏಕದಿನ ಪಂದ್ಯ: ಇಂಗ್ಲೆಂಡ್ ಗೆ 7 ವಿಕೆಟ್ ಗಳ ಭರ್ಜರಿ ಜಯ
ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ ಸೋಲನ್ನನುಭವಿಸಿದೆ.
ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ ಸೋಲನ್ನನುಭವಿಸಿದೆ.
ಇಯಾನ್ ಬೆಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ 5ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದೆ. ಟಾಸ್ ಗೆದ್ದರೂ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಅಲ್ಪಮೊತಕ್ಕೆ ಕಟ್ಟಿಹಾಕುವ ಇಂಗ್ಲೆಂಡ್ ತಂಡದ ಪ್ರಯತ್ನ ಸಫಲವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸುರೇಶ್ ರೈನಾ ಅವರ ಸಮಯೋಚಿತ ಆಟದ ನೆರವಿನಿಂದ 226ರನ್ ಗಳಿಸಿತು. 227 ರನ್ ಗಳ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದರೂ, ಇಯಾನ್ ಬೆಲ್ ಅವರ ಆಕರ್ಷಕ ಶತಕದ ನೆರವಿನಿಂದ 5ನೇ ಏಕದಿನ ಪಂದ್ಯವನ್ನು 7 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.
ಇಂಗ್ಲೆಂಡ್ ಪರ ಇಯಾನ್ ಬೆಲ್ 113 ರನ್ ಗಳಿಸಿದರೆ, ಕುಕ್ 22 ರನ್ ಗಳಿಸಿ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಪೀಟರ್ಸೆನ್ ಕೇವಲ 6 ರನ್ ಗಳಿಸಿ ಶಮಿ ಅಹ್ಮದ್ ಬೌಲಿಂಗ್ ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ರೂಟ್ 31 ರನೆ ಗಳಿಸಿ ಜಡೇಜಾ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಈ ಹಂತದಲ್ಲಿ ಬೆಲ್ ಜೊತೆಗೂಡಿದ ಮಾರ್ಗನ್ ಗೆಲುವಿನ ಔಪಚಾರಿಕತೆಯನ್ನು ಮುಗಿಸಿದರು. ಪಂದ್ಯ ಕೊನೆಗೊಳ್ಳಲು ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ ಇಂಗ್ಲೆಂಡ್ ಜಯದ ನಗುಬೀರಿತು.
ಭಾರತದ ಪರ ಇಶಾಂತ್ ಶರ್ಮಾ, ಶಮಿ ಅಹ್ಮದ್ ಮತ್ತು ರವೀಂದ್ರ ಜಡೇಜಾ ಅವರು ತಲಾ 1 ವಿಕೆಟ್ ಪಡೆದರು. ಭಾರತ ಈ ಪಂದ್ಯವನ್ನು ಸೋತಿದ್ದರೂ ಏಕದಿನ ಸರಣಿ ಭಾರತಕ್ಕೆ ದಕ್ಕಿದೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-2 ಮುನ್ನಡೆ ಪಡೆಯುವುದರ ಮೂಲಕ ಸರಣಿಯನ್ನು ತನ್ನ ಪಾಲಾಗಿಸಿಕೊಂಡಿದೆ.