ಈಗಿನ ಸುದ್ದಿ

ರಾಜ್ ಠಾಕ್ರೆ ಜೊತೆ ಕೈಜೋಡಿಸುವ ಸುಳಿವು ನೀಡಿದ ಉದ್ಧವ್ ಠಾಕ್ರೆ

ಶಿವಸೇನಾದ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಹೋದರ ಸಂಬಂಧಿ ರಾಜ್ ಠಾಕ್ರೆ ಅವರೊಡನೆ ಇರುವ ಭಿನ್ನಭಿಪ್ರಾಯಕ್ಕೆ ನಾಂದಿ...

ಮುಂಬೈ: ಶಿವಸೇನಾದ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಹೋದರ ಸಂಬಂಧಿ ರಾಜ್ ಠಾಕ್ರೆ ಅವರೊಡನೆ ಇರುವ ಭಿನ್ನಭಿಪ್ರಾಯಕ್ಕೆ ನಾಂದಿ ಹಾಡಿ, ಕೈಜೋಡಿಸುವ ಸುಳಿವು ನೀಡಿದ್ದಾರೆ.

ಬುಧವಾರ ಪತ್ರಕರ್ತರೊಬ್ಬರು ನಡೆಸಿದ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಅವರಿಗೆ ಮೈತ್ರಿಯಾಗಲು ಇಚ್ಚೆಯಿದ್ದರೆ ಅವರಿಗೆ ಸುಸ್ವಾಗತ ಎಂದು ಪರೋಕ್ಷವಾಗಿ ಶಿವಸೇನಾಗೆ ಆಹ್ವಾನವಿತ್ತಿದ್ದಾರೆ.

ಈ ಸಂಬಂಧ ರಾಜ್ ಠಾಕ್ರೆ ಮತ್ತು ನಾವು ಪರಸ್ಪರ ಮಾತಕತೆ ನಡೆಸಿ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.

2006ರಲ್ಲಿ ರಾಜ್ ಠಾಕ್ರೆ ಅವರು ಶಿವಸೇನಾ ತೊರೆದು ಮಹರಾಷ್ಟ್ರ ನವನಿರ್ಮಾಣ ಸೇನಾ ಸಂಘಟನೆ ಸ್ಥಾಪಿಸಿದರು. ಶಿವಸೇನಾ ಮತ್ತು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಸಂಘಟನೆಗಳು ಮೈತ್ರಿಯಾದರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭಯ ಹುಟ್ಟುತ್ತದೆ. ಮಹಾರಾಷ್ಟ್ರದಲ್ಲಿ ಎರಡು ಪಕ್ಷಗಳು ಪ್ರಬಲವಾಗಿದ್ದವು. ಎರಡು ಸಂಘಟನೆಗಳು ಮೈತ್ರಿಯಾಗುವುದರಿಂದ ರಾಜಕೀಯ ಪಕ್ಷಗಳಿಗೆ ಚುನಾವಣೆ ಬಗ್ಗೆ ಆತಂಕ ಹುಟ್ಟಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು Quad ಮಹತ್ವದ ತೀರ್ಮಾನ; ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್; 12 TMC ಸಂಸದರು BJP ಸೇರ್ಪಡೆ!

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್

SCROLL FOR NEXT