ಕಾಂಚಿಪುರಂ: ಪ್ರವಾಹದಿಂದ ಸಂಪೂರ್ಣ ಹಾಳಾಗಿರುವ ಉತ್ತರಾಖಂಡದ ಕೇದಾರನಾಥದ ಶಿವ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಕಂಚಿ ಮಠ ಸಂಪೂರ್ಣ ಸಿದ್ಧವಿದೆ ಎಂದು ಮಠದ ಮುಖ್ಯಸ್ಥ ಜಯೇಂದ್ರ ಸರಸ್ವತಿ ಅವರು ಗುರುವಾರ ಹೇಳಿದ್ದಾರೆ.
ಅಗತ್ಯ ಬಿದ್ದರೆ ಪ್ರವಾಹದಿಂದ ದೇವಸ್ಥಾನಕ್ಕೆ ಆದ ನಷ್ಟದ ಬಗ್ಗೆ ಮೌಲ್ಯಮಾಪನ ಮಾಡುವ ವ್ಯವಸ್ಥೆಯನ್ನು ಮಠ ಮಾಡಲಿದೆ. ಕೇದಾರನಾಥ ದೇವಾಲಯ ನಮ್ಮ ದೇಶದ ಪರಂಪರೆಯ ಮತ್ತು ಸಂಸ್ಕೃತಿಯ ಪ್ರತೀಕ ಎಂದು ಜಯೇಂದ್ರ ಸರಸ್ವತಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೇದಾರನಾಥ ದೇವಾಲಯದ ಪುನರ್ ನಿರ್ಮಾಣಕ್ಕೆ ಭಾರತೀಯ ಪುರಾತತ್ವ ಇಲಾಖೆ ಅಥವಾ ಇತರ ಯಾವುದಾದರು ಧಾರ್ಮಿಕ ಸಂಸ್ಥೆಯ ನೆರವು ಪಡೆದುಕೊಳ್ಳವಂತೆ ಉತ್ತರಾಖಂಡ ಸರ್ಕಾರಕ್ಕೆ ಕಂಚಿ ಮಠ ಸಲಹೆ ನೀಡಿದೆ ಎಂದು ಅವರು ಹೇಳಿದರು.