ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತಂತಿ ವಾಹನ ಸ್ಥಗಿತ: ಅಪಾಯಕ್ಕೆ ಸಿಲುಕಿದ 24 ಯಾತ್ರಿಗಳು

ತಮಿಳುನಾಡಿನ ಖ್ಯಾತ ಪಳನಿ ದೇವಸ್ಥಾನದ ಆವರಣದಲ್ಲಿರುವ ತಂತಿವಾಹನ ಮಾರ್ಗ ಮಧ್ಯೆ ಸ್ಥಗಿತಗೊಂಡಿದ್ದು, ಸುಮಾರು 24 ಯಾತ್ರಿಗಳು ಅಪಾಯಕ್ಕೆ ಸಿಲುಕಿದ್ದಾರೆ.

Srinivasa Murthy VN
Updated On : 5 Jun 2013, 5:49 am

ಪಳನಿ: ತಮಿಳುನಾಡಿನ ಖ್ಯಾತ ಪಳನಿ ದೇವಸ್ಥಾನದ ಆವರಣದಲ್ಲಿರುವ ತಂತಿವಾಹನ ಮಾರ್ಗ ಮಧ್ಯೆ ಸ್ಥಗಿತಗೊಂಡಿದ್ದು, ವಾಹನದಲ್ಲಿರುವ ಸುಮಾರು 24 ಯಾತ್ರಿಗಳು ಅಪಾಯಕ್ಕೆ ಸಿಲುಕಿದ್ದಾರೆ.

ಪಳನಿಯಲ್ಲಿರುವ ಖ್ಯಾತ ದಂಡಾಯುಧಪಾಣಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎರಡು ತಂತಿವಾಹನಗಳು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಈ ಎರಡು ವಾಹನಗಳಲ್ಲಿ ಸುಮಾರು 24 ಯಾತ್ರಿಗಳು ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ. ಯಾತ್ರಾರ್ಥಿಗಳನ್ನು ರಕ್ಷಿಸಲು ಸ್ಥಳೀಯ ಪೊಲೀಸರು ಮತ್ತು ತಂತಿವಾಹನ ಮೇಲ್ವಿಚಾರಕರು ಹರಸಾಹಾಸಪಡುತ್ತಿದ್ದು, ಹಗ್ಗಗಳ ಮೂಲಕ ಯಾತ್ರಿಗಳನ್ನು ಕೆಳಗಿಳಿಸುತ್ತಿದ್ದಾರೆ.

ಈಗಾಗಲೇ 8 ಮಂದಿ ಯಾತ್ರಿಗಳನ್ನು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಮೇಲ್ವಿಚಾರಕರು ಸುರಕ್ಷಿತವಾಗಿ ಕೆಳೆಗಿಳಿಸಿದ್ದಾರೆ. ಉಳಿದ ಯಾತ್ರಿಗಳನ್ನು ಸುರಕ್ಷಿತವಾಗಿ ಕೆಳಗಿಳಿಸುತ್ತೇವೆ ಎಂದು ದೇವಾಲಯದ ಮೇಲ್ವಿಚಾರಕರು ವಿಶ್ವಾಸಪಡಿಸಿದ್ದಾರೆ.

ನೆಲ ಮಟ್ಟದಿಂದ ಸುಮಾರು 100 ಅಡಿ ಎತ್ತರದಲ್ಲಿರುವ ಈ ತಂತಿ ವಾಹನಗಳು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತಿದ್ದವು. ಅಲ್ಲದೆ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೂಡ ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement