ಸ್ಪಾಟ್ ಫಿಕ್ಸಿಂಗ್: ಬಿಸಿಸಿಐನಲ್ಲಿ ತೆರವಾಗಿದ್ದ ಸ್ಥಾನಗಳ ಭರ್ತಿ
ಮುಂಬೈ: ಸ್ಪಾಟ್ ಫಿಕ್ಸಿಂಗ್ ಬಿರುಗಾಳಿಯಿಂದ ಬಿಸಿಸಿಐನಲ್ಲಿ ತೆರವಾಗಿದ್ದ ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಕರ್ನಾಟಕದ ತಲ್ಲಂ ವೆಂಕಟೇಶ್ ಮತ್ತು ಸಂಜಯ್ ಪಾಟೀಲ್ ಅವರು ನೂತನ ಖಜಾಂಚಿ ಮತ್ತು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿ ಸಂಜಯ್ ಪಾಟೀಲ್ ನೇಮಕಗೊಂಡಿದ್ದು, ನೂತನ ಖಜಾಂಚಿಯಾಗಿ ಕರ್ನಾಟಕದ ತಲ್ಲಂ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಹಠಮಾರಿ ಧೋರಣೆಯನ್ನು ಖಂಡಿಸಿ ಬಿಸಿಸಿಐ ಖಜಾಂಚಿಯಾಗಿದ್ದ ಅಜಯ್ ಶಿರ್ಕೆ ಮತ್ತು ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ತಮ್ಮ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಇಬ್ಬರು ಸದಸ್ಯರಿಂದ ತೆರವಾಗಿದ್ದ ಈ ಸ್ಥಾನಗಳಿಗೆ ಇಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿರುವ ಜಗಮೋಹನ್ ದಾಲ್ಮಿಯಾ ಅವರು ನೇಮಕ ಮಾಡಿದ್ದಾರೆ.