ಕೇಂದ್ರ ಸಚಿವ ಚಿದಂಬರಂಗೆ ಮಾತೃ ವಿಯೋಗ
ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರ ತಾಯಿ ಲಕ್ಷ್ಮಿ ಪಳನಿಯಪ್ಪನ್ ಅವರು ಶುಕ್ರವಾರ ನಿಧನರಾಗಿದ್ದಾರೆ.
ಚೆನ್ನೈ: ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರ ತಾಯಿ ಲಕ್ಷ್ಮಿ ಪಳನಿಯಪ್ಪನ್ ಅವರು ಶುಕ್ರವಾರ ನಿಧನರಾಗಿದ್ದಾರೆ.
ಚೆನ್ನೈನಲ್ಲಿ ವಾಸವಿದ್ದ ಚಿದಂಬರಂ ಅವರ ತಾಯಿ ಲಕ್ಷ್ಮಿ ಪಳನಿಯಪ್ಪನ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತ ದೇಹದ ಅಂತಿಮ ವಿಧಿವಿಧಾನಗಳನ್ನು ಇಂದು ಸಂಜೆ ಚೆನ್ನೈ ನಗರದಲ್ಲಿ ನೆರವೇರಿಸಲು ಕುಟುಂಬವರ್ಗದವರು ತೀರ್ಮಾನಿಸಿದ್ದು, ಅಂತಿಮ ಕಾರ್ಯಕ್ಕೆ ಚಿದಂಬರಂ ಅವರು ಆಗಮಿಸಿದ್ದಾರೆ.
ಈಗಾಗಲೇ ಚಿದಂಬರಂ ಅವರ ಚೆನ್ನೈ ನಿವಾಸಕ್ಕೆ ಗಣ್ಯಾತಿಗಣ್ಯರ ದಂಡೇ ಆಗಮಿಸುತ್ತಿದ್ದು, ಪಾರ್ಥೀವ ಶರೀರದ ದರ್ಶನ ಪಡೆಯುತ್ತಿದ್ದಾರೆ. ತಮಿಳುನಾಡು ರಾಜ್ಯಪಾಲ ಕೆ.ರೋಶಯ್ಯ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಚಿದಂಬರಂ ಅವರ ತಾಯಿ ನಿಧನದ ವಿಚಾರ ತಿಳಿಯುತ್ತಿದ್ದಂತೆಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಲಕ್ಷ್ಮಿ ಪಳನಿಯಪ್ಪನ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.