ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಡಿಯಲ್ಲಿ ಗುಂಡಿನ ಚಕಮಕಿ: ಭಾರತೀಯ ಯೋಧ ಸಾವು

Srinivasa Murthy VN
Updated On : 7 Jun 2013, 5:08 am

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಪಾಕ್ ಸೈನಿಕರು ಮತ್ತೆ ಯುದ್ಧ ವಿರಾಮ ನಿಯಮವನ್ನು ಉಲ್ಲಂಘಿಸಿ ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ ಓರ್ವ ಸೈನಿಕನನ್ನು ಹತ್ಯೆ ಮಾಡಿದ್ದಾರೆ.

ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ ಪೂಂಚ್ ಪ್ರಾಂತ್ಯದ ಮಂಡಿ ಗ್ರಾಮದಲ್ಲಿ ಗುಂಡಿನ ದಾಳಿ ನಡೆಸಿರುವ ಪಾಕಿಸ್ತಾನ ಸೈನಿಕರು, ಕಾವಲು ಕಾಯುತ್ತಿದ್ದ ಭಾರತೀಯ ಯೋಧನನ್ನು ಹತ್ಯೆ ಮಾಡಿ ಒಳ ನುಸುಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತ ಯೋಧನನ್ನು ಸುಭೇದಾರ್ ಬಚ್ಚನ್ ಸಿಂಗ್ ಎಂದು ಗುರುತಿಸಲಾಗಿದ್ದು, ಪಾಕ್ ಸೈನಿಕರ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸುತ್ತಿದ್ದಾರೆ. ಗುಂಡಿನ ಚಕಮಕಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗಷ್ಟೇ ಪಾಕ್ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಕ್ರೂರವಾಗಿ ಹತ್ಯೆ ಮಾಡಿ, ಗಡಿ ಪ್ರದೇಶ ಉದ್ವಿಗ್ನಗೊಳ್ಳಲು ಕಾರಣವಾಗಿದ್ದರು. ಇದರಿಂದ ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಭಾರಿ ಹಿನ್ನಡೆಯಾಗಿತ್ತು. ಅಲ್ಲದೆ ಇತ್ತೀಚೆಗಿನ ಚೀನಿ ಸೈನಿಕರ ಗಡಿ ಒತ್ತುವರಿ ಪ್ರಕರಣ ಕೂಡ ಉಭಯ ದೇಶಗಳ ಬಾಂಧವ್ಯಕ್ಕೆ ತೊಡಕಾಗಿತ್ತು. ಸತತ ಒತ್ತಡದಿಂದಾಗಿ ಮತ್ತು ಉಭಯ ದೇಶಗಳ ಸಂಧಾನದಿಂದಾಗಿ ಚೀನಿ ಸೈನಿಕರು ತಮ್ಮ ಗಡಿ ಪ್ರದೇಶಕ್ಕೆ ವಾಪಸ್ಸಾಗಿದ್ದರು. ಈ ಎರಡೂ ಪ್ರಕರಣಗಳು ಹಸಿರಾಗಿರುವಾಗಲೇ ಪಾಕ್ ಸೈನಿಕರು ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement