ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಜಿಯಾ' ಆತ್ಮಹತ್ಯೆ: ಪ್ರಿಯಕರ ಸೂರಜ್ ಬಂಧನ

ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಿಯಕರ ಸೂರಜ್ ಪಾಂಚೋಲಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Srinivasa Murthy VN
Updated On : 10 Jun 2013, 7:33 am

ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಸೂರಜ್ ಪಾಂಚೋಲಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ನಟಿ ಜಿಯಾಖಾನ್ ಅವರು ಬರೆದಿದ್ದ ಡೆತ್ ನೋಟ್ ಪೊಲೀಸರಿಗೆ ಲಭಿಸಿದ್ದು, ಇಂದು ಬೆಳಗ್ಗೆ ಮಾಧ್ಯಮಗಳಲ್ಲಿಯೂ ಕೂಡ ಪ್ರಸಾರವಾಗಿತ್ತು. ಅಲ್ಲದೆ ಡೆತ್ನೋಟ್ನಲ್ಲಿನ ಅಂಶಗಳು ಬಹಿರಂಗವಾಗುತ್ತಿದ್ದಂತೆಯೇ ಸೂರಜ್ ಪಾಂಚೋಲಿಯನ್ನು ಕೂಡಲೇ ಬಂಧಿಸಬೇಕು ಎಂದು ಜಿಯಾ ಪೋಷಕರು ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗುತ್ತಿದೆ. ಇದೀಗ ಮುಂಬೈ ಪೊಲೀಸರು ಜಿಯಾ ಖಾನ್ ಪ್ರಿಯಕರ ಸೂರಜ್ ಪಾಂಚೋಲಿಯನ್ನು ಬಂಧಿಸಿದ್ದು, ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ಬಾಲಿವುಡ್ ನಟಿ ಜಿಯಾಖಾನ್ ಅವರು ಕಳೆದ ವಾರ ಮುಂಬೈನ ಭಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಕುಟುಂಬ ಮೂಲಗಳ ಪ್ರಕಾರ ಜಿಯಾ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಸ್ವತಃ ಜಿಯಾ ಖಾನ್ ಕೂಡ ತನ್ನ ಪ್ರೇಮದ ಬಗ್ಗೆ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಳು ಎಂದು ತಿಳಿದುಬಂದಿದೆ. ಪ್ರಿಯಕರ ಸೂರಜ್ ಪಾಂಚೋಲಿ ಜಿಯಾಳನ್ನು ಪ್ರೀತಿಸಿ ಮೊಸ ಮಾಡಿದ್ದನು. ಅಲ್ಲದೆ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ ಆತ ತದನಂತರ ಬೇರೆ ಯುವತಿಯರ ಸಹವಾಸ ಬೆಳೆಸಿದ್ದನು.

ಇದರಿಂದ ತೀವ್ರವಾಗಿ ನೊಂದಿದ್ದ ಜಿಯಾ ಹಲವು ಬಾರಿ ಸೂರಜ್ನನ್ನು ಮನವೊಲಿಸಲು ಯತ್ನಿಸಿದ್ದಳು. ಆತ್ಮಹತ್ಯೆಗೂ ಕೆಲವೇ ಕ್ಷಣಗಳ ಮುನ್ನ ಕೂಡ ಆಕೆ ಸೂರಜ್ ಗೆ  ಕರೆ ಮಾಡಿ ಆತನನ್ನು ಮನವೊಲಿಸಲು ಪ್ರಯತ್ನಿಸಿದ್ದಳು. ಆದರೆ ಪ್ರತಿಫಲ ಕಾಣದೆ ಕೊನೆಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement