ಡಾಲರ್ ಎದುರು ದಾಖಲೆ ಕುಸಿತ ಕಂಡ ರುಪಾಯಿ ಮೌಲ್ಯ
ಡಾಲರ್ ಎದುರು ರುಪಾಯಿ ಮೌಲ್ಯವು ದಾಖಲೆ ಇಳಿಕೆ ಕಂಡಿದ್ದು, ಬೆಳಗ್ಗೆ 1 ಡಾಲರ್ಗೆ 58.90 ರುಪಾಯಿಗಳಾಗಿವೆ.
ಮುಂಬೈ: ಡಾಲರ್ ಎದುರು ರುಪಾಯಿ ಮೌಲ್ಯವು ದಾಖಲೆ ಇಳಿಕೆ ಕಂಡಿದ್ದು, ಬೆಳಗ್ಗೆ 1 ಡಾಲರ್ಗೆ 58.90 ರುಪಾಯಿಗಳಾಗಿವೆ.
ರುಪಾಯಿ ಮೌಲ್ಯ ಕುಸಿತಕ್ಕೆ ಭಾರತೀಯ ಷೇರುಗಳ ಮೌಲ್ಯ ಇಳಿಕೆ ಮತ್ತು ಡಾಲರ್ಸ್ಗಾಗಿ ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವುದು ರುಪಾಯಿ ಮೌಲ್ಯ ಕುಸಿತ ಕಾಣಲು ಕಾರಣ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಭಾರತದಲ್ಲಿ ಡಾಲರ್ಗಾಗಿ ಬೇಡಿಕೆ ಹೆಚ್ಚಿತ್ತು. ಅಲ್ಲದೆ ಭಾರತೀಯ ಹೂಡಿಕೆದಾರರು ಹೊರದೇಶಗಳಿಂದ ಖಚ್ಛಾ ಉತ್ಪನ್ನಗಳನ್ನು ಖರೀದಿಸುವ ಸಲುವಾಗಿ ಡಾಲರ್ಗಾಗಿ ಬೇಡಿಕೆ ಇಟ್ಟಿರುವುದೂ ಕೂಡ ರುಪಾಯಿ ಮೌಲ್ಯ ಕಡಿತಕ್ಕೆ ಕಾರಣವಾಗಿದೆ.
ದೇಶದ ಷೇರುಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರುಪಾಯಿ ಮೌಲ್ಯ ಇಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಷೇರುದಾರರಲ್ಲಿ ಆತಂಕವನ್ನುಂಟು ಮಾಡಿದೆ. ಅಲ್ಲದೆ ಇಂದು ಬೆಳಗ್ಗೆ ಕಲ್ಲಿದ್ದಲು ಹಗಣರಕ್ಕೆ ಸಂಬಂಧಿಸಿದಂತೆ ಜಿಂದಾಲ್ ಸಂಸ್ಥೆಯ ಮಾಲೀಕ ನವೀನ್ ಜಿಂದಾಲ್ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಜಿಂದಾಲ್ ಸಂಸ್ಥೆಯ ಷೇರುಗಳ ಬೇಡಿಕೆ ಗಣನೀಯವಾಗಿ ಇಳಿಕೆ ಕಂಡಿತ್ತು.
ಮಧ್ಯಾಹ್ನದ ಹೊತ್ತಿಗೆ ರುಪಾಯಿ ಮೌಲ್ಯದಲ್ಲಿ ಕೊಂಚ ಚೇತರಿಕೆ ಕಂಡಿದ್ದು 1 ಡಾಲರ್ಗೆ 58.65 ರುಪಾಯಿಗಳಾಗಿವೆ. ಒಟ್ಟಾರೆ ಭಾರತೀಯ ಖಾಸಗಿ ಬ್ಯಾಂಕುಗಳು, ಷೇರುದಾರರ ಡಾಲರ್ ವ್ಯಾಮೋಹ ರುಪಾಯಿ ಮೌಲ್ಯ ಕುಸಿತಗೊಳ್ಳುವಂತೆ ಮಾಡಿದೆ.