ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಖ್ಯಾತ ತಮಿಳು ನಟ ಮತ್ತು ನಿರ್ದೇಶಕ ಮಣಿವಣ್ಣನ್ ನಿಧನ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಆರ್.ಮಣಿವಣ್ಣನ್ ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.

Srinivasa Murthy VN
Updated On : 15 Jun 2013, 4:24 am

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಆರ್.ಮಣಿವಣ್ಣನ್ ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.

ಚೆನ್ನೈನ ನೆಸಪಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಮಣಿವಣ್ಣನ್ ಅವರು ಇಂದು ಮಧ್ಯಾಹ್ನ ಹೃದಯಾಘಾತಕ್ಕೀಡಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಾಗಲೇ ಮಣಿವಣ್ಣನ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರಿಗೆ 58 ವರ್ಷಗಳಾಗಿದ್ದು, ಮೃತರು ಪತ್ನಿ, ಓರ್ವ ಪುತ್ರಿ ಮತ್ತು ಮಗನನ್ನು ಅಗಲಿದ್ದಾರೆ.

ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿದ್ದ ಮಣಿವಣ್ಣನ್ ಅವರು ಸುಮಾರು 50 ಚಿತ್ರಗಳನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ಅವರು ನಿರ್ದೇಶಿಸಿದ್ದ 50ನೇ ಚಿತ್ರ 'ನಾಗರಾಜ ಚೋಳನ್ ಎಂಎ, ಎಂಎಲ್‌ಎ' ಚಿತ್ರ ತಮಿಳುನಾಡಿನ ರಾಜಕೀಯ ವಿಡಂಬನೆಯಿಂದ ಖ್ಯಾತಿಗಳಿಸಿತ್ತು. ಅಲ್ಲದೆ ಹಲವು ಚಿತ್ರಗಳಲ್ಲಿ ಸಹನಟರಾಗಿ ಅಭಿನಯಿಸಿದ್ದ ಅವರು, ಕರ್ನಾಟಕ ಮೂಲದ ಅರ್ಜುನ್ ಸರ್ಜಾ ಅಭಿನಯದ ಮುದಲ್ವಾನ್, ಸಂಘಮಮ್, ರಜನಿಕಾಂತ್ ಅಭಿನಯದ ಪಡೆಯಪ್ಪ ಚಿತ್ರಗಳು ಸೇರಿದಂತೆ ಸುಮಾರು 400 ಚಿತ್ರಗಳಲ್ಲಿ ಸಹಕಲಾವಿದ ಮತ್ತು ಹಾಸ್ಯನಟರಾಗಿ ಅಭಿನಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement