ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಿಯಾ-ಸೂರಜ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ಸಲ್ಮಾನ್

ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್‌ಗೆ ನಾನು ಬುದ್ಧಿವಾದ ಹೇಳಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

Srinivasa Murthy VN
Updated On : 16 Jun 2013, 4:23 am

ಮುಂಬೈ: ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್‌ಗೆ ನಾನು ಬುದ್ಧಿವಾದ ಹೇಳಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಜಿಯಾಖಾನ್ ಮತ್ತು ಸೂರಜ್ ಪಾಂಚೋಲಿ ಪ್ರೇಮ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರ ಹೆಸರು ತಳುಕುಹಾಕಿಕೊಂಡಿರುವ ಕುರಿತು ಸ್ಪಷ್ಟನೆ ನೀಡಿರುವ ಸಲ್ಮಾನ್ ಖಾನ್ ಅವರು, ನನಗೂ ಜಿಯಾಖಾನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನನ್ನು ಸೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಖಾಸಗಿ ರಾಷ್ಟ್ರೀಯ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಲ್ಮಾನ್ ಖಾನ್, 'ಕಳೆದ ಹಲವು ದಿನಗಳಿಂದ ಜಿಯಾ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬರುತ್ತಿದೆ. ಆದರೆ ನಾನು ಈ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ. ಸೂರಜ್ ಪಾಂಚೋಲಿ ತಂದೆ ಆದಿತ್ಯ ಪಾಂಚೋಲಿ ಅವರು ಸೂರಜ್ ಮತ್ತು ಜಿಯಾ ಸಂಬಂಧದ ಕುರಿತು ನನ್ನೊಂದಿಗೆ ಮಾತನಾಡಿರಲಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ಅನಗತ್ಯವಾಗಿ ತಳುಕು ಹಾಕಿಕೊಂಡಿದೆ. ನಟಿ ಜಿಯಾಖಾನ್ ಸಾವು ನನಗೂ ನೋವು ತಂದಿದೆ. ಆದರೆ ಜಿಯಾ ತಾಯಿ ರಬಿಯಾ ಖಾನ್ ಅವರು ಪ್ರಕರಣದಲ್ಲಿ ನನ್ನ ಹೆಸರು ತಂದಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ ತಮ್ಮ ಮತ್ತು ಜಿಯಾ ನಡುವಿನ ಸ್ನೇಹದ ಕುರಿತು ಮಾತನಾಡಿರುವ ಸಲ್ಮಾನ್ ಖಾನ್, ಜಿಯಾ ಓರ್ವ ನಟಿಯಾಗಿ ನನಗೆ ಗೊತ್ತು. ಆದರೆ ಆಕೆಯ ಖಾಸಗಿ ಜೀವನದ ಕುರಿತು ನನಗೆ ತಿಳಿದಿಲ್ಲ. ನನ್ನ ಜೀವನದ ಕುರಿತು ಯೋಚಿಸಲು ನನಗೆ ಸಮಯವಿಲ್ಲ. ಹೀಗಿರುವಾಗ ನಾನೇಕೆ ಬೇರೆಯವರ ಜೀವನದಲ್ಲಿ ಮಧ್ಯ ಪ್ರವೇಶ ಮಾಡಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement