ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ

ಸೋಮವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನೂತನ ಸಚಿವರ ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರಪತಿ ಭವನ ಸಿದ್ಧಗೊಂಡಿದೆ.

Srinivasa Murthy VN
Updated On : 16 Jun 2013, 4:54 am

ನವದೆಹಲಿ: ಸೋಮವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನೂತನ ಸಚಿವರ ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರಪತಿ ಭವನ ಸಿದ್ಧಗೊಂಡಿದೆ.

ನಾಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಹಲವು ಖಾತೆಗಳು ಬದಲಾವಣೆಯಾಗುವ ಸಾಧ್ಯತೆ ಇದೆ. ಅಲ್ಲದೆ ನಿನ್ನೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಹಿನ್ನಲೆಯಲ್ಲಿ ಕೇಂದ್ರ ಸಚಿವರಾದ ಸಿಪಿ ಜೋಷಿ ಮತ್ತು ಅಜಯ್ ಮಕೆನ್ ಅವರು ತಮ್ಮ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಸಚಿವರ ರಾಜಿನಾಮೆಯನ್ನು ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಗೀಕರಿಸಿದ್ದಾರೆ.

ರಾಜಿನಾಮೆ ಅಂಗೀಕಾರದ ನಂತರ ಮಾತನಾಡಿರುವ ಜೋಷಿ ಅವರು, ಹೈಕಮಾಂಡ್ ಆದೇಶದ ಮೇರೆಗೆ ತಾವು ತಮ್ಮ ಮೇಲ್ಸೇತುವೆ ಮತ್ತು ಹೆದ್ದಾರಿ ಖಾತೆ ಮತ್ತು ರೇಲ್ವೈ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇವೆ. ಮುಂದೆ ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಯುಪಿಎ ಸರ್ಕಾರದ ಮಟ್ಟಿಗೆ ಇದು ಕೊನೆಯ ಸಂಪುಟ ವಿಸ್ತರಣೆಯಾಗಿದ್ದು, ಲೋಕಸಭಾ ಚುನಾವಣೆಗೆ ಇನ್ನು ಕೇವಲ 1 ವರ್ಷ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಾಳಿನ ಸಚಿವ ಸಂಪುಟದಲ್ಲಿ ಪಕ್ಷದ ಪ್ರಮಾಣಿಕರನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ನಾಳಿನ ಸಚಿವ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸದಸ್ಯರ ಪಟ್ಟಿಯನ್ನು ಈಗಾಗಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರವಾನಿಸಲಾಗಿದೆ. ಪಿಕೆ ಬನ್ಸಾಲ್ ಮತ್ತು ಅಶ್ವನಿ ಕುಮಾರ್ ಅವರ ರಾಜಿನಾಮೆಯಿಂದ ರೇಲ್ವೇ ಮತ್ತು ಕಾನೂನು ಖಾತೆಗಳು ತೆರವಾಗಿದ್ದವು. ಅಲ್ಲದೆ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಮೊದಲ ಸಂಪುಟ ವಿಸ್ತರಣೆ ವೇಳೆ ಪ್ರಧಾನಿ ಸಿಂಗ್ ಅವರು ತಮ್ಮ ಬಳಿ ಹಲವು ಖಾತೆಗಳನ್ನು ಉಳಿಸಿಕೊಂಡಿದ್ದರು. ಈ ಎಲ್ಲ ಖಾತೆಗಳನ್ನು ನಾಳಿನ ಸಂಪುಟ ವಿಸ್ತರಣೆ ವೇಳೆ ಹಂಚಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement