ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉಕ್ಕುತ್ತಿರುವ ಯಮುನೆ: ದೆಹಲಿಗೂ ಆವರಿಸಿದ ಪ್ರವಾಹ ಭೀತಿ

ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೂ ಪ್ರವಾಹ ಭೀತಿ ಆವರಿಸಿದೆ.

Srinivasa Murthy VN
Updated On : 19 Jun 2013, 3:51 am

ನವದೆಹಲಿ: ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೂ ಪ್ರವಾಹ ಭೀತಿ ಆವರಿಸಿದೆ.

ಯಮುನಾ ತಟದಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ನದಿ ಉಕ್ಕಿಹರಿಯುತ್ತಿದ್ದು, ಜಲಾಶಯಗಳಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಯಮುನಾ ನದಿ ಪಾತ್ರದ ಜನತೆಗೆ ಎಚ್ಚರಿಕೆ ರವಾನಿಸಲಾಗಿದೆ. ದೆಹಲಿ ಜನತೆಯಲ್ಲಿ ಪ್ರವಾಹ ಭೀತಿ ಆವರಿಸಿದ್ದು, ನದಿ ಪಾತ್ರದ ಸುಮಾರು 2 ಸಾವಿರ ಜನರನ್ನು ತುರ್ತಾಗಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.

ಯಮುನಾ ನದಿ ಉಕ್ಕಿಹರಿಯುತ್ತಿರುವುದರಿಂದ ಪ್ರಮುಖ ರೇಲ್ವೇ ಸಂಪರ್ಕಗಳು ಮುಚ್ಚಿಹೋಗಿದ್ದು, ಸುಮಾರು 145 ವರ್ಷಗಳಷ್ಟು ಹಳೆಯದಾದ ರೇಲ್ವೇ ಮೇಲ್ಸೇತುವೆ ಮುಳುಗಡೆಯಾಗಿದೆ. ಹರ್ಯಾಣದ ಹಥಿನಿಕುಂಡ್ ಜಲಾಶಯದಿಂದ ಸುಮಾರು 8.06 ಲಕ್ಷ ಕ್ಯೂಸೆಕ್ಸ್ ನೀರನ್ನು ಯಮುನಾ ನದಿಗೆ ಹರಿಸಲಾಗಿದ್ದು, ಇದರಿಂದ ಯಮುನಾ ನದಿ ಮತ್ತಷ್ಟು ರಭಸವಾಗಿ ಹರಿಯುತ್ತಿದೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಿಎಂ ಸ್ಪೋಲಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರವಾಹ ಭೀತಿ ಎದುರಾಗುತ್ತಿದ್ದಂತೆಯೇ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿಪತ್ತು ನಿರ್ವಹಣಾ ಸಿಬ್ಬಂಧಿಗಳಿಗೆ ತುರ್ತು ಸಂದೇಶ ರವಾನಿಸಿದೆ. ಅಲ್ಲದೆ ನದಿ ಪಾತ್ರಗಳಲ್ಲಿ ವಿಪತ್ತು ನಿಯಂತ್ರಣ ಕೇಂದ್ರಗಳನ್ನು ತೆರೆದಿದ್ದು, ಎಸ್‌ಎಂಎಸ್ ಮತ್ತು ದೂರವಾಣಿ ಕರೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೆ ಸುಮಾರು 62 ಯಾಂತ್ರಿಕ ಬೋಟ್‌ಗಳನ್ನು ಸನ್ನದ್ಧವಾಗಿರಿಸಿದ್ದು, ಯಾವುದೇ ಪರಿಸ್ಥಿತಿ ನಿರ್ವಹಣೆಗೆ ಸೈನಿಕರು ಸಿದ್ಧರಾಗಿದ್ದಾರೆ ಎಂದು ಸ್ಪೋಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement