ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಂಗಾಪುರ ಓಪನ್: ಸೈನಾಗೆ ಸೋಲು

Srinivasa Murthy VN
Updated On : 21 Jun 2013, 7:14 am

ಸಿಂಗಾಪುರ: ಸಿಂಗಾಪುರದಲ್ಲಿ ನಡೆಯುತ್ತಿರುವ ಸಿಂಗಾಪುರ ಮಹಿಳಾ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಸೋಲು ಕಂಡಿದ್ದಾರೆ.

ಸಿಂಗಾಪುರ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಲಿಂಡವೇನಿ ಫಾನೇತ್ರಿ ಅವರ ವಿರುದ್ಧ ಸೈನಾ ನೆಹ್ವಾಲ್ ಹಿನಾಯವಾಗಿ ಸೋಲುಂಡಿದ್ದಾರೆ. ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದ ಸೈನಾ ಮೊದಲ ಸೆಟ್ ಅನ್ನು 21-17ರಲ್ಲಿ ಗೆದ್ದುಕೊಂಡರು. ಆದರೆ ಅನಂತರ ಮಂಕಾದ ಸೈನಾ, ನಂತರದ ಎರಡೂ ಸೆಟ್‌ಗಳನ್ನು 13-21, 13-21 ನೇರ ಸೆಟ್‌ಗಳ ಮೂಲಕ ಸೋಲುಕಂಡರು.

ಅದ್ಭುತವಾಗಿ ಆಡಿದ ಇಂಡೋನೇಷ್ಯಾದ ಲಿಂಡವೇನಿ ಫಾನೇತ್ರಿ ಅವರು ಕೇವಲ 57 ನಿಮಿಷಗಳಲ್ಲಿ ಜಯ ದಾಖಲಿಸುವ ಮೂಲಕ ಸೆಮಿ ಫೈನಲ್‌ಗೆ ಮುನ್ನಡೆದರು. ಹೀನಾಯವಾಗಿ ಸೋಲು ಕಂಡ ಸೈನಾ ಟೂರ್ನಿಯಿಂದಲೇ ಹೊರಬಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement