ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉತ್ತರಾಖಂಡ: ಕಾರ್ಯಾಚರಣೆ ಸ್ಥಗಿತಗೊಳಿಸಿದ ವಾಯುಸೇನೆ

ಉತ್ತರಾಖಂಡದಲ್ಲಿ ಯಾವುದೇ ಕ್ಷಣದಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ವಾಯು ಸೇನೆ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Srinivasa Murthy VN
Updated On : 23 Jun 2013, 4:27 am

ಡೆಹ್ರಾಡೂನ್: ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದಲ್ಲಿ ಯಾವುದೇ ಕ್ಷಣದಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ವಾಯು ಸೇನೆ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಭೀಕರ ಪ್ರವಾಹಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಸಂತ್ರಸ್ಥರಿಗೆ ಮತ್ತೊಂದು ಆಘಾತಕಾರಿ ಪರಿಸ್ಥಿತಿ ಎದುರಾಗಿದ್ದು, ಉತ್ತರಾಖಂಡದಲ್ಲಿ ಮತ್ತೆ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಛರಿಕೆ ನೀಡಿದೆ. ಹವಾಮಾನ ಇಲಾಖೆಯ ಎಚ್ಛರಿಕೆಯ ಅನ್ವಯ ವಾಯುಸೇನೆ ಇಂದು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇನ್ನೂ ಸುಮಾರು 34 ಸಾವಿರ ಸಂತ್ರಸ್ತರು ಅಪಾಯದಲ್ಲಿ ಸಿಲುಕಿದ್ದು, ಅವರನ್ನು ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಭೂಮಾರ್ಗವಾಗಿ ರಕ್ಷಿಸಲು ಯತ್ನಿಸುತ್ತಿದ್ದಾರೆ.

ಈ ನಡುವೆ ಈಗಾಗಲೇ ಡೆಹ್ರಾಡೂನ್ ತಲುಪಿರುವ ಸಾವಿರಾರು ನಿರಾಶ್ರಿತರು ನೀರು ಮತ್ತು ಆಹಾರಕ್ಕಾಗಿ ಪರದಾಡುತ್ತಿದ್ದು, ವಾಯುಸೇನೆ ಕೂಡ ಏನೂ ಮಾಡಲಾಗದಂತಹ ದುಸ್ತರ ಪರಿಸ್ಥಿತಿ ಎದುರಾಗಿದೆ. ಕೇದಾರನಾಥ, ಬದ್ರಿನಾಥ, ರುದ್ರಪ್ರಯಾಗ, ಕೇಡುಗಾಲದಂತಹ ಯಾತ್ರಾ ಸ್ಥಳಗಳಲ್ಲಿ ಅಪಾಯಕ್ಕೆ ಸಿಲುಕಿರುವ ಯಾತ್ರಿಕರನ್ನು ರಕ್ಷಿಸುವ ಸಾವಾಲು ಒಂದೆಡೆಯಾದರೆ, ರಕ್ಷಿಸಿದ ಯಾತ್ರಿಕರಿಗೆ ಆಹಾರ ಮತ್ತು ನೀರು ಒದಗಿಸುವುದು ಮತ್ತೊಂದು ದೊಡ್ಡ ಸವಾಲಾಗಿದೆ.

ಒಟ್ಟಾರೆ ಪ್ರಕೃತಿ ಮುನಿದರೆ ಮಾನವ ಎಷ್ಟು ಚಿಕ್ಕವನಾಗುತ್ತಾನೆ ಎಂಬುದಕ್ಕೆ ಪ್ರಸ್ತುತ ಪ್ರಕೃತಿ ವೈಪರೀತ್ಯವೇ ಸಾಕ್ಷಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement