ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಂಗ್ಲಾದಲ್ಲಿ ಮುಂದುವರಿದ ಹಿಂಸಾಚಾರ: ಮತ್ತೆ 6 ಸಾವು

ಬಾಂಗ್ಲಾದೇಶದಲ್ಲಿ ಕೋಮು ದಳ್ಳುರಿ ಮುಂದುವರೆದಿದ್ದು, ಭಾನುವಾರ ನಡೆದ ಹಿಂಸಾಚಾರದಲ್ಲಿ ಮತ್ತೆ 6 ಜನರು ಸಾವಿಗೀಡಾಗಿದ್ದಾರೆ.

Srinivasa Murthy VN
Updated On : 3 Mar 2013, 6:09 am

ಢಾಕಾ: ಬಾಂಗ್ಲಾದೇಶದಲ್ಲಿ ಕೋಮು ದಳ್ಳುರಿ ಮುಂದುವರೆದಿದ್ದು, ಭಾನುವಾರ ನಡೆದ ಹಿಂಸಾಚಾರದಲ್ಲಿ ಮತ್ತೆ 6 ಜನರು ಸಾವಿಗೀಡಾಗಿದ್ದಾರೆ.

ಜಮಾತ್ ಇ ಇಸ್ಲಾಮಿ ಸಂಘಟನೆಯ ಉಪಾದ್ಯಕ್ಷ ದೆಲ್ವಾರ್ ಹುಸ್ಸೇನ್ ಸಯ್ಯೀದ್‌ನನ್ನು ಕಳೆದ ಗುರುವಾರ ಗಲ್ಲಿಗೇರಿಸಿದ ನಂತರ ಬಾಂಗ್ಲಾದೇಶದಾದ್ಯಂತ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮರಣದಂಡನೆ ಜಾರಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರೆದಿದೆ.

ಇಂದು ನಡೆದ ಹಿಂಸಾಚಾರದಲ್ಲಿ ಒಟ್ಟು ಆರು ಜನರು ಸಾವಿಗೀಡಾಗಿದ್ದು, ಒಟ್ಟು 90ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಇಂದು ರೇಲ್ವೇ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಪ್ರತಿಭಟನೆಯಿಂದಾಗಿ ಬಾಂಗ್ಲಾದೇಶದಾದ್ಯಂತ ಹಲವು ರೈಲುಗಳು ಸ್ಥಗಿತಗೊಂಡಿವೆ. ಅಲ್ಲದೆ ಶಾಹ್‌ಜಾನ್‌ಪುರ ಪೊಲೀಸ್ ಠಾಣೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು, ದಾಳಿ ವೇಳೆ ಪೊಲೀಸ್ ಮತ್ತು ಪ್ರತಿಭಟನಾಕಾರರ ಪಡೆಯಿಂದ ಹಲವು ಸುತ್ತು ಗುಂಡಿನ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಲ್ಲದೆ ಬಾಂಗ್ಲಾ ಪ್ರವಾಸ ಕೈಗೊಂಡಿರುವ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಪ್ರತಿಭಟನೆ ಬಿಸಿತಾಗಿದ್ದು, ಪ್ರಣಬ್ ಮುಖರ್ಜಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಸಂದರ್ಭದಲ್ಲಿ ನಡೆದ ದಾಳಿ ವೇಳೆ ಜಮಾತ್ ಇ ಇಸ್ಲಾಮಿ ಸಂಘಟನೆ ಉಪಾದ್ಯಕ್ಷ ಹುಸ್ಸೇನ್ ಸಯ್ಯೀದ್ ಯುದ್ದ ಅಪರಾಧದಲ್ಲಿ ಪಾಲ್ಗೊಂಡಿರುವುದು ನ್ಯಾಯಾಲಯದಲ್ಲಿ ಧೃಡಪಟ್ಟಿತ್ತು. ಸಯ್ಯೀದ್‌ನಿಂದಾಗಿ ಒಟ್ಟು 58 ಮಂದಿ ಅಮಾಯಕರು ಸಾವಿಗೀಡಾಗಿದ್ದರು.  ಹೀಗಾಗಿ ಅಪರಾಧಿ ಹುಸ್ಸೇನ್ ಸಯ್ಯೀದ್‌ಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ಆದೇಶದಂತೆ ಕಳೆದ ಗುರುವಾರ ಸಯ್ಯೀದ್‌ನನ್ನು ಗಲ್ಲಿಗೇರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement