ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿಂಗಲ್ಸ್‌ಗೆ ವಿದಾಯ ಹೇಳಿದ ಸಾನಿಯಾ

ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಅಂತಾರಾಷ್ಟ್ರೀಯ ಸಿಂಗಲ್ಸ್ ಟೆನ್ನಿಸ್ ಪಂದ್ಯಾವಳಿಗೆ ವಿದಾಯ ಹೇಳಿದ್ದಾರೆ.

Srinivasa Murthy VN
Updated On : 3 Mar 2013, 6:47 am

ಮುಂಬೈ: ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಅಂತಾರಾಷ್ಟ್ರೀಯ ಸಿಂಗಲ್ಸ್ ಟೆನ್ನಿಸ್ ಪಂದ್ಯಾವಳಿಗೆ ವಿದಾಯ ಹೇಳಿದ್ದಾರೆ.

ಅನಾರೋಗ್ಯದಿಂದಾಗಿ ತಾವು ಸಿಂಗಲ್ಸ್ ಟೆನ್ನಿಸ್ ಪಂದ್ಯಕ್ಕೆ ವಿದಾಯ ಹೇಳುತ್ತಿರುವುದಾಗಿ ಸಾನಿಯಾ ತಿಳಿಸಿದ್ದಾರೆ. ಭಾನುವಾರ ಮುಂಬೈನ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾನಿಯಾ ಮಿರ್ಜಾ ಅವರು ಮಾತನಾಡಿ, ನನ್ನ ಟೆನ್ನಿಸ್ ಜೀವನವನ್ನು ಮತ್ತಷ್ಟು ಕಾಲ ಮುಂದುವರೆಸಲು ನಾನು ಸಿಂಗಲ್ಸ್ ಪಂದ್ಯಗಳಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಸಾನಿಯಾ ತಿಳಿಸಿದರು.

16 ವೈಯುಕ್ತಿಕ ಡಬ್ಲ್ಯೂಟಿಎ ಸಿಂಗಲ್ಸ್ ಪ್ರಶಸ್ತಿಗಳನ್ನು ಪಡೆದಿರುವ ಸಾನಿಯಾ, ತಮ್ಮದೇ ಆದ ಕಾರಣಗಳನ್ನು ನೀಡಿ ಸಿಂಗಲ್ಸ್ ಪಂದ್ಯಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

"ನಾನು ಕಳೆದ 8 ವರ್ಷಗಳಿಂದ ನಾನು ಟೆನ್ನಿಸ್ ಆಡುತ್ತಿದ್ದೇನೆ. ಟೆನ್ನಿಸ್‌ನಲ್ಲಿ ಸಾಕಷ್ಟು ಪ್ರಶಸ್ತಿಗಳನ್ನೂ ಗಳಿಸಿದ್ದೇನೆ. ಆದರೆ ಇನ್ನು ಮುಂದೆ ನಾನು ಸಿಂಗಲ್ಸ್ ಆಡಲು ಸಾಧ್ಯವಿಲ್ಲ. ಕಳೆದ ಒಂದು ವರ್ಷದಿಂದ ನಾನು ಹಲವು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದೇನೆ. ಶಸ್ತ್ರ ಚಿಕಿತ್ಸೆಯಿಂದ ಹೊರಬರಲು ಹಲವು ತಿಂಗಳುಗಳೇ ಬೇಕಾಗುತ್ತದೆ. ಡಬಲ್ಸ್‌ನಲ್ಲಿ ನಾನು ಮತ್ತಷ್ಟು ಕಾಲ ಮುಂದುವರಿಯಲು ಬಯಸಿದ್ದೇನೆ. ಹೀಗಾಗಿ ನಾನು ಸಿಂಗಲ್ಸ್ ಪಂದ್ಯವನ್ನು ಅನಿವಾರ್ಯವಾಗಿ ಬಿಡಬೇಕಿದೆ' ಎಂದು ಸಾನಿಯಾ ತಿಳಿಸಿದ್ದಾರೆ.

ಒಟ್ಟಾರೆ ಮಹಿಳೆಯರ ಟೆನ್ನಿಸ್ ಪಂದ್ಯಗಳಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಸಾನಿಯಾ ನಿಧಾನವಾಗಿ ಟೆನ್ನಿಸ್‌ನಿಂದ ದೂರಸರಿಯುತ್ತಿರುವುದು ವಿಪರ್ಯಾಸವೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement