ಡ್ರಗ್ಸ್ ಪತ್ತೆ ಪ್ರಕರಣ: ಆರೋಪಿ ಅನೂಪ್‌ಸಿಂಗ್ ಆತ್ಮಹತ್ಯೆಗೆ ಯತ್ನ
ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಅನೂಪ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮೊಹಾಲಿ: ಅಪಾರ್ಟ್‌ಮೆಂಟ್ ಬಳಿ ಪತ್ತೆಯಾದ ಡ್ರಗ್ಸ್ ಪ್ರಕರಣ ಬಾಕ್ಸರ್‌ಗಳಾದ ವಿಜೇಂದರ್ ಸಿಂಗ್ ಮತ್ತು ರಾಮ್ ಸಿಂಗ್ ಅವರನ್ನು ಬಿಗಿಯಾಗಿ ಹಿಡಿಯತೊಡಗಿದೆ. ಈ ನಡುವೆ ಬಂಧಿತ ಆರೋಪಿ ಅನೂಪ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮೊಹಾಲಿಯ ಫತೇಗಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಅನೂಪ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಹಾಲಿ ಜೀರಕ್‌ಪುರದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೊಹಾಲಿ ಪೊಲೀಸರು ಇಬ್ಬರು ಬಾಕ್ಸರ್‌ಗಳಾದ ವಿಜೇಂದರ್ ಸಿಂಗ್ ಮತ್ತು ರಾಮ್‌ಸಿಂಗ್ ಅವರ ವಿಚಾರಣೆ ನಡೆಸಿದ್ದಾರೆ. ಆದರೆ ನಿನ್ನೆಯ ಪ್ರಾಥಮಿಕ ತನಿಖೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಅಮಾಯಕ ಎಂದು ತಿಳಿದು ಬಂದಿದ್ದರೂ, ಹೆಚ್ಚಿನ ಮಾಹಿತಿಗಾಗಿ ಅವರನ್ನು ಇಂದು ವಿಚಾರಣೆಗೊಳಪಡಿಸಲಾಗುತ್ತಿದೆ.
ಈ ನಡುವೆ ಪೊಲೀಸರ ವಿಚಾರಣೆ ವೇಳೆ ಬಾಕ್ಸರ್ ರಾಮ್ ಸಿಂಗ್ ನೀಡಿದ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. ಪೊಲೀಸರ ಇಂದಿನ ವಿಚಾರಣೆಯಲ್ಲಿ ಬಾಕ್ಸರ್ ರಾಮ್ ಸಿಂಗ್, ಡ್ರಗ್ ಮಾಫಿಯಾದಲ್ಲಿ ಬಂಧಿತನಾಗಿರುವ ಅನೂಪ್ ಸಿಂಗ್‌ರನ್ನು ನಾಲ್ಕೈದು ಬಾರಿ ಭೇಟಿಯಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಬಾಕ್ಸರ್ ರಾಮ್ ಸಿಂಗ್ ನೀಡಿದ ಹೇಳಿಕೆ ಇದೀಗ ವಿಜೇಂದರ್ ಸಿಂಗ್ ಅವರನ್ನೂ ಅನುಮಾನದಿಂದ ನೋಡುವಂತೆ ಮಾಡಿದೆ.