ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ಪ್ರಧಾನಿ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ: ಸಚಿವ ಖುರ್ಷೀದ್

ಪ್ರಧಾನಿ ಅಶ್ರಫ್ ಅವರೊಂದಿಗೆ ಯಾವುದೇ ರಾಜಕೀಯ ಮಾತುಕತೆ ನಡೆಸಿಲ್ಲ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ.

Srinivasa Murthy VN
Updated On : 9 Mar 2013, 3:33 am

ಜೈಪುರ: ಭಾರತಕ್ಕೆ ಭೇಟಿ ನೀಡಿರುವ ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರೊಂದಿಗೆ ಯಾವುದೇ ರಾಜಕೀಯ ಮತ್ತು ದ್ವಿಪಕ್ಷೀಯ ಮಾತುಕತೆ ನಡೆಸಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ.

ಜೈಪುರಕ್ಕೆ ಆಗಮಿಸಿರುವ ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರು ಇಂದು ಮಧ್ಯಾಹ್ನ ಸಚಿವ ಖುರ್ಷೀದ್ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖುರ್ಷೀದ್, ಇದೊಂದು ಶಿಷ್ಟಾಚಾರದ ಭೇಟಿಯಷ್ಟೇ. ಭೋಜನಕೂಟದಲ್ಲಿ ನಾವು ಯಾವುದೇ ರಾಜಕೀಯ ವಿಷಯಗಳನ್ನು ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕ್ ಪ್ರಧಾನಿಗಳ ಅಜ್ಮೀರ್ ದರ್ಗಾ ಭೇಟಿ ಕುರಿತು ಪ್ರಶ್ನಿಸಿದಾಗ, ಅಜ್ಮೀರ್ ದರ್ಗಾ ಒಂದು ಪವಿತ್ರಸ್ಥಳ. ಅಲ್ಲಿಗೆ ಯಾರು ಬೇಕಾದರು ಬರಬಹುದು. ಅಂತೆಯೇ ಪಾಕಿಸ್ತಾನ ಪ್ರಧಾನಿ ಅಶ್ರಫ್ ಅವರೂ ಭೇಟಿ ನೀಡಿದ್ದಾರೆ ಎಂದು ಖುರ್ಷೀದ್ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement