ಹಫೀಜ್ ಜೊತೆ ವೇದಿಕೆ ಹಂಚಿಕೆ: ಯಾಸಿನ್ ಮಲ್ಲಿಕ್ ವಿಚಾರಣೆ
26/11 ದಾಳಿ ರೂವಾರಿ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೆ; ಜಮ್ಮು ಲಿಬರೇಷನ್ ಫ್ರಂಟ್ ನ ಮುಖ್ಯಸ್ಥ ಯಾಸಿನ್ ಮಲ್ಲಿಕ್ ವಿಚಾರಣೆ
ಶ್ರೀನಗರ: 26/11 ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡು ಭಾರತೀಯ ವಿರೋಧಕ್ಕೆ ಕಾರಣವಾಗಿದ್ದ ಜಮ್ಮು ಲಿಬರೇಷನ್ ಫ್ರಂಟ್ ನ ಮುಖ್ಯಸ್ಥ ಯಾಸಿನ್ ಮಲ್ಲಿಕ್ ನನ್ನು ಶ್ರೀನಗರದಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಸಂಸತ್ ದಾಳಿಕೋರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ನಡೆದ ಶೋಕಾಚಾರಣೆ ಕಾರ್ಯಕ್ರಮದಲ್ಲಿ 26/11 ದಾಳಿಯ ರೂವಾರಿ ಅಫೀಜ್ ಸಯ್ಯೀದ್ ನೊಂದಿಗೆ ಯಾಸಿನ್ ಮಲ್ಲಿಕ್ ವೇದಿಕೆ ಹಂಚಿಕೊಂಡಿದ್ದರು. ಪಾಕಿಸ್ತಾನದಿಂದ ನಿನ್ನೆ ಭಾರತಕ್ಕೆ ಆಗಮಿಸಿದ್ದ ಯಾಸಿನ್ ಮಲ್ಲಿಕ್ ರನ್ನು ಇಂದು ಶ್ರೀನಗರದ ವಿಮಾನ ನಿಲ್ದಾಣದಲ್ಲಿ ವಿಚಾರಣೆಗೊಳಪಡಿಸಲಾಗುತ್ತಿದೆ.
ಹಫೀಜ್ ಸಯ್ಯೀದ್ ಮತ್ತು ಯಾಸಿನ್ ಮಲ್ಲಿಕ್ ನಡುವಿನ ಸಂಬಂಧ ಕುರಿತು ಇಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಇಂದು ಯಾಸಿನ್ ರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಈ ಬಗ್ಗೆ ಸ್ವತಃ ಜೆಎಲ್ಎಫ್ ಮುಖ್ಯಸ್ಥ ಯಾಸಿನ್ಮಲ್ಲಿಕ್ರನ್ನು ವಿಚಾರಣೆಗೊಳಪಡಿಸಿದ್ದಾರೆ.