ದಾವಣಗೆರೆ ಮಹಾನಗರ ಪಾಲಿಕೆ 'ಕೈ' ಮುನ್ನಡೆ
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯನ್ನು ತನ್ನ ಕೈ ವಶಮಾಡಿಕೊಳ್ಳುವತ್ತ ಕಾಂಗ್ರೆಸ್ ದಾಪುಗಾಲಿರಿಸಿದೆ.
ಮತಎಣಿಕೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದ್ದು, ನಿರೀಕ್ಷೆಯಂತೆಯೇ ದಾವಣೆಗೆರೆ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಿದ್ದತೆ ನಡೆಸಿದೆ. ಒಟ್ಟು 41 ಸದಸ್ಯ ಬಲದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಈಗಾಗಲೇ 24 ಸ್ಥಾನಗಳನ್ನು ಪಡೆಯುವ ಮೂಲಕ ಮಹಾನಗರ ಪಾಲಿಕೆಯನ್ನು ಕೈ ವಶ ಮಾಡಿಕೊಳ್ಳುವ ಸ್ಪಷ್ಟ ಸೂಚನೆ ನೀಡಿದೆ.
ಪ್ರತಿಸ್ಪರ್ಧಿ ಬಿಜೆಪಿಗೆ ಮುಖಭಂಗವಾಗಿದ್ದು, ಇತ್ತೀಚಿನ ವರದಿ ಬಂದಾಗ ಬಿಜೆಪಿ ಕೇವಲ ಒಂದು ಸ್ಥಾನಗಳಿಸಿತ್ತು. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಿಸಿದ್ದಾರೆ.