ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡಿವೈಎಸ್‌ಪಿ ಹತ್ಯೆ : ರಾಜಾಭಯ್ಯಾ ಆಪ್ತರ ಬಂಧನ

ಕುಂದ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಾಜಾಭಯ್ಯಾ ಅವರ ಇಬ್ಬರು ಆಪ್ತರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

Srinivasa Murthy VN
Updated On : 12 Mar 2013, 4:19 am

ಲಖನೌ: ಉತ್ತರ ಪ್ರದೇಶದ ಕುಂದ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಾಜಾಭಯ್ಯಾ ಅವರ ಇಬ್ಬರು ಆಪ್ತರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಕುಂದ ಗ್ರಾಮದ ಡಿವೈಎಸ್‌ಪಿ ಜಿಯಾ-ಉಲ್-ಹಕ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ರಾಜಾಭಯ್ಯಾ ಅವರ ಇಬ್ಬರು ಆಪ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜಾಭಯ್ಯಾ ಆಪ್ತರೆಂದು ಹೇಳಲಾಗುತ್ತಿರುವ ರಾಜೀವ್ ಯಾದವ್ ಮತ್ತು ಸಂಜಯ್ ಸಿಂಗ್ ಎಂಬ ವ್ಯಕ್ತಿಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸ್ಥಳೀಯ ನ್ಯಾಯಾಲಯ ಈ ಇಬ್ಬರು ವ್ಯಕ್ತಿಗಳನ್ನು 14 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.

ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ಕುಂದ ಗ್ರಾಮದಲ್ಲಿ ನಡೆದ ಗುಂಪುಘರ್ಷಣೆ ವೇಳೆ ಅಪರಿಚಿತ ವ್ಯಕ್ತಿಗಳು ಡಿವೈಎಸ್‌ಪಿ ಜಿಯಾ-ಉಲ್-ಹಕ್ ಅವರನ್ನು ಭೀಕರವಾಗಿ ಕೊಂದು ಪರಾರಿಯಾಗಿದ್ದರು. ಅಲ್ಲದೆ ಗುಂಪು ಘರ್ಷಣೆಯಲ್ಲಿ ಸ್ಥಳೀಯ ಇಬ್ಬರು ನಿವಾಸಿಗಳೂ ಸಹ ಸಾವನ್ನಪ್ಪಿದ್ದರು. ಹತ್ಯೆ ಹಿಂದೆ ಉತ್ತರ ಪ್ರದೇಶದ ಪ್ರಭಾವಿ ರಾಜಕಾರಣಿ ರಾಜಾಭಯ್ಯಾ ಅವರ ಹೆಸರು ಭಲವಾಗಿ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರಾಜಾಭಯ್ಯಾ ಅವರಿಂದ ರಾಜಿನಾಮೆ ಪಡೆದು, ಪ್ರಕರಣದ ತನಿಖೆಯನ್ನು ಸಿಬಿಐಗಿ ಒಪ್ಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement