ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ವಿಫಲ

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಯ ಬಹುನಿರೀಕ್ಷಿತ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ವಿಫಲವಾಗಿದೆ.

Srinivasa Murthy VN
Updated On : 12 Mar 2013, 7:09 am

ಬಲಾಸೂರ್: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಯ ಬಹುನಿರೀಕ್ಷಿತ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ವಿಫಲವಾಗಿದೆ.

ಒಡಿಶಾದ ಚಾಂಡಿಪುರದಲ್ಲಿ ಇಂದು ನಡೆದ ನಿರ್ಭಯ ಕ್ಷಿಪಣಿಯ ಪ್ರಯೋಗ ವಿಫಲವಾಗಿದ್ದು, ವಿಮಾನದಿಂದ ಕಳಚಿದ ನಿರ್ಭಯ ಕ್ಷಿಪಣಿ ನಿಗದಿತ ದೂರದ ಗುರಿ ತಲುಪುವ ಮುನ್ನವೇ ತನ್ನ ಶಕ್ತಿಕಳೆದುಕೊಂಡು ಕೆಳಗುರುಳಿದೆ.

ಇಂದು ಬೆಳ್ಳಗ್ಗೆ ಸುಮಾರು 11:50ರ ಸಮಯದಲ್ಲಿ ಕ್ಷಿಪಣಿಯನ್ನು ಒಡಿಶಾದ ಚಾಂಡಿಪುರದಲ್ಲಿ  ಪ್ರಯೋಗಿಸಲಾಯಿತು. 1000 ಕಿ.ಮೀ ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿರುವ ನಿರ್ಭಯ ಕ್ಷಿಪಣಿ, ನಿರ್ಧಿಷ್ಟ ಗುರಿ ತಲುಪುವ ಮುನ್ನವೇ ವಿಫಲವಾಗಿದೆ. ಕ್ಷಿಪಣಿಯ ವಿಫಲತೆಗೆ ವಿಜ್ಞಾನಿಗಳು ಕಾರಣ ಹುಡುಕುತ್ತಿದ್ದಾರೆ.

ಅಮೆರಿಕದ ಪ್ರಮುಖ ಕ್ಷಿಪಣಿ ತೋಮಾಹಕ್ಗೆ ಹೋಲಿಸಲಾಗುತ್ತಿದ್ದ ನಿರ್ಭಯ ಕ್ಷಿಪಣಿಯನ್ನು, ಬೆಂಗಳೂರು ಮೂಲದ ರಕ್ಷಣಾ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement