ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅತ್ಯಾಚಾರ ತಡೆ ತಿದ್ದುಪಡಿ ಮಸೂದೆಗೆ ಕ್ಯಾಬಿನೆಟ್ ಒಪ್ಪಿಗೆ

ಅತ್ಯಾಚಾರ ತಡೆ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟಸಭೆಯಲ್ಲಿ ಒಪ್ಪಿಗೆ ದೊರೆತಿದೆ.

Srinivasa Murthy VN
Updated On : 14 Mar 2013, 7:46 am

ನವದೆಹಲಿ: ಅತ್ಯಾಚಾರ ತಡೆ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ನವದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟಸಭೆಯಲ್ಲಿ ಅತ್ಯಾಚಾರ ತಡೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಕೆಲ ಮಹತ್ವದ ಬದಲಾವಣೆಗಳನ್ನೊಳಗೊಂಡ ಮಸೂದೆಗೆ ಸಚಿವ ಸಂಪುಟ ತನ್ನ ಒಪ್ಪಿಗೆ ನೀಡಿದೆ. ಲೈಂಗಿಕ ಕಿರುಕುಳ ಪದಕ್ಕೆ ಬದಲಾಗಿ 'ರೇಪ್' (ಅತ್ಯಾಚಾರ) ಪದ ಬಳಕೆಗೆ ಮತ್ತು ಸಹಮತ ಲೈಂಗಿಕ ಸಂಪರ್ಕದ ವಯೋವುತಿಯನ್ನು 18 ರಿಂದ 16 ಕ್ಕೆ ಇಳಿಸುವ ಪ್ರಸ್ತಾಪಕ್ಕೆ ಸಂಪುಟ ಸಭೆ ತನ್ನ ಒಪ್ಪಿಗೆ ನೀಡಿದೆ.

ಮಾರ್ಚ್ 18 ರಂದು ಅಂದರೆ ಸೋಮವಾರದಂದು ಸರ್ವಪಕ್ಷ ಸಭೆ ಕರೆದು ತಿದ್ದುಪಡಿಗೊಂಡಿರುವ ಮಸೂದೆಯ ಕುರಿತು ಚರ್ಚೆ ನಡೆಸಲಾಗುತ್ತದೆ. ಸರ್ವಪಕ್ಷ ಸಭೆಯ ನಂತರ ಅಂದರೆ ಮಾರ್ಚ್ 22ರೊಳಗೆ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement