ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಫ್ಜ ಲ್ ಗಲ್ಲು: ಭಾರತದ ವಿರುದ್ದ 'ಪಾಕ್ ಠರಾವು'

ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಪಾಕಿಸ್ತಾನ ಸಂಸತ್ತಿನಲ್ಲಿ ಭಾರತದ ವಿರುದ್ಧ ನಿರ್ಣಯ ಮಂಡಿಸಲಾಗಿದೆ.

Srinivasa Murthy VN
Updated On : 14 Mar 2013, 7:51 am

ನವದೆಹಲಿ: ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಪಾಕಿಸ್ತಾನ ಸಂಸತ್ತಿನಲ್ಲಿ ಭಾರತದ ವಿರುದ್ಧ ನಿರ್ಣಯ ಮಂಡಿಸಲಾಗಿದೆ.

ಮತ್ತೆ ಪಾಕಿಸ್ತಾನ ಕಾಲು ಕೆರೆದು ಭಾರತವನ್ನು ಕೆಣಕಿದೆ. 2001ರ ಸಂಸತ್ ದಾಳಿ ರೂವಾರಿ ಉಗ್ರ ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದನ್ನು ಖಂಡಿಸಿ ಪಾಕಿಸ್ತಾನ ಸಂಸತ್ ಭಾರತದ ವಿರುದ್ದ ನಿರ್ಣಯ ಮಂಡಿಸಿದೆ. ಜಮಾತ್ ಉಲೇಮಾ ಇ ಇಸ್ಲಾಮಿ ಪಕ್ಷದ ಅಧ್ಯಕ್ಷ ಮೌಲಾನಾ ಫಾಜ್ಲುರ್ ರೆಹ್ಮಾನ್ ಮಂಡಿಸಿದ ನಿರ್ಣಯಕ್ಕೆ ಪಾಕಿಸ್ತಾನ ಸಂಸತ್ ಅನುಮೋದನೆ ನೀಡಿದೆ.

ಅಲ್ಲದೆ ಮೃತ ಅಫ್ಜಲ್ ಗುರು ದೇಹವನ್ನು ಆತನ ಸಂಬಂಧಿಕರಿಗೆ ನೀಡಬೇಕು ಎಂದು ಪಾಕ್ ಆಗ್ರಹಿಸಿದೆ. 'ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದು ಖಂಡನಾರ್ಹ. ಭಾರತದ ಈ ಕಾರ್ಯವನ್ನು ಪಾಕಿಸ್ತಾನ ಕಟು ಶಬ್ದಗಳಿಂದ ಖಂಡಿಸುತ್ತದೆ. ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಅಫ್ಜಲ್ ಗುರುವಿನ ದೇಹವನ್ನು ಭಾರತ ಆತನ ಸಂಬಂಧಿಕರಿಗೆ ನೀಡಬೇಕು' ಎಂದು ಪಾಕಿಸ್ತಾನ ಸಂಸತ್ ಠರಾವು ಹೊರಡಿಸಿದೆ.

ಪಾಕಿಸ್ತಾನದ ನಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement