ಉಗ್ರರ ದಾಳಿ ಸ್ಥಳದಲ್ಲಿ ಪಾಕ್ ನಿರ್ಮಿತ ವಸ್ತುಗಳ ಪತ್ತೆ: ಶಿಂಧೆ
ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದ ಸ್ಥಳದಲ್ಲಿ ಪಾಕಿಸ್ತಾನದಲ್ಲಿ ನಿರ್ಮಿತವಾಗಿರುವ ಕೆಲ ವಸ್ತುಗಳು ಲಭಿಸಿವೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಶ್ರೀನಗರ: ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದ ಸ್ಥಳದಲ್ಲಿ ಪಾಕಿಸ್ತಾನದಲ್ಲಿ ನಿರ್ಮಿತವಾಗಿರುವ ಕೆಲ ವಸ್ತುಗಳು ಲಭಿಸಿವೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಮಾತನಾಡಿದ ಶಿಂಧೆ, ಉಗ್ರರು ದಾಳಿ ನಡೆಸಿದ ಘಟನಾ ಸ್ಥಳದಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ನಿರ್ಮಾಣಗೊಂಡ ವಸ್ತುಗಳು ಮತ್ತು ಕೆಲ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯಿಂದ ದಾಳಿ ನಡೆಸಿದ ಉಗ್ರರು ಮೂಲತಃ ಪಾಕಿಸ್ತಾನ ಮೂಲದವೆರೆಂದು ತಿಳಿದು ಬಂದಿದೆ' ಎಂದು ಹೇಳಿದರು.
'ಶ್ರೀನಗರದ ಬೆಮಿನಾ ಪ್ರದೇಶದಲ್ಲಿರುವ ಪಬ್ಲಿಕ್ ಶಾಲೆಗೆ ಹಾಕಲಾಗಿದ್ದ ತಂತಿಬೇಲಿಯಲ್ಲಿನ ಸಣ್ಣ ರಂಧ್ರವನ್ನು ಬಳಸಿಕೊಂಡು ಉಗ್ರರು ಶಾಲೆಯೊಳಗೆ ನುಗ್ಗಿದ್ದಾರೆ. ನಂತರ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಲು ಮುಂದಾದ ಉಗ್ರರನ್ನು ಸಿಆರ್‌ಪಿಎಫ್ ಯೋಧರು ಮತ್ತು ಗಡಿ ರಕ್ಷಣಾ ಪಡೆಗಳು ಗುಂಡಿಕ್ಕಿ ಕೊಂದು ಹಾಕಿವೆ. ಘಟನೆಯಲ್ಲಿ ಸಿಆರ್‌ಪಿಎಫ್ ಮತ್ತು ಗಡಿ ರಕ್ಷಣಾ ಪಡೆಯ ಐದು ಮಂದಿ ಯೋಧರು ಸಾವಿಗೀಡಾಗಿದ್ದು, ಆರು ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಶಿಂಧೆ ಲೋಕಸಭೆಗೆ ತಿಳಿಸಿದರು.
ನಿನ್ನೆ ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ ಪ್ರಕರಣದಲ್ಲಿ ಕರ್ನಾಟಕದ ಮೂಲದ 27 ವರ್ಷದ ಸತೀಶ್ ಎಂಬಾತ ಹುತಾತ್ಮನಾಗಿದ್ದ. ಮೃತ ಸತೀಶ್ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಗ್ರಾಮದ ನಿವಾಸಿಯಾಗಿದ್ದು, ಇಂದು ಸತೀಶ್‌ನ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.