ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಲೋಕಾ' ದಾಳಿ: ಆಸ್ತಿ ವಿವರ ಬಹಿರಂಗ

ಬೆಂಗಳೂರಿನ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದ್ದು, ಆಸ್ತಿ ವಿವರ ಮಾಧ್ಯಮಗಳಿಗೆ ಲಭಿಸಿದೆ.

Srinivasa Murthy VN
Updated On : 14 Mar 2013, 4:22 am

ಬೆಂಗಳೂರು: ಬೆಂಗಳೂರಿನ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದ್ದು, ಆಸ್ತಿ ವಿವರ ಮಾಧ್ಯಮಗಳಿಗೆ ಲಭಿಸಿದೆ.

ಬೆಂಗಳೂರಿನ ವಿವಿದೆಡೆಯಲ್ಲಿರುವ ಕೆಳ ಹಂತದ ಸರ್ಕಾರಿ ನೌಕರರ ಮನೆಗಳ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಬಿಬಿಎಂಪಿಯ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎನ್.ಕೃಷ್ಣ ಅವರ ಶ್ರೀನಗರದ ಮನೆಯಲ್ಲಿ ಸುಮಾರು 2.05 ಕೋಟಿ ಆಸ್ತಿ ಪತ್ತೆಯಾಗಿದೆ.

ಅಂತೆಯೇ ಕಿದ್ವಾಯಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಂಕಪ್ಪ ಅವರ ನಾಗರಬಾವಿ ನಿವಾಸದಲ್ಲಿ 1.4 ಕೋಟಿ ಆಸ್ತಿ, ಸಹಕಾರ ಸಂಘಗಳ ಅಪರ ನಿಂಬಂಧಕರಾಗಿ ಕೆಲಸಮಾಡುತ್ತಿರುವ ಸಿ. ಎಸ್.ವಿರೇಶ್ ಅವರ ರಾಜರಾಜೇಶ್ವರಿ ನಗರದ ನಿವಾಸದಲ್ಲಿ 2.27 ಕೋಟಿ ಆಸ್ತಿ ಪತ್ತೆಯಾಗಿದೆ. ಅಂತೆಯೇ ಡಿ ಗ್ರೂಪ್ ನೌಕರರಾಗಿರುವ ಕರಿಯಪ್ಪ ಅವರ ಯಲಹಂಕ ನಿವಾಸದಲ್ಲಿ 2.44 ಕೋಟಿ ಆಸ್ತಿ ಪತ್ತೆಯಾಗಿದೆ.

ಒಟ್ಟಾರೆ ಇಂದು ಬೆಳಗ್ಗೆ ಬೆಂಗಳೂರಿನ ವಿವಿದೆಡೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಸರ್ಕಾರದ ಕೆಳಹಂತದ ನೌಕರರು ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಗ್ರಹ ಮಾಡಿ ತಮ್ಮ ಅಧಿಕಾರಿಗಳಿಗಿಂತ ತಾವು ಕಡಿಮೆ ಇಲ್ಲ ಎಂದು ಸಾಬೀತು ಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement