ಇಟಲಿ ರಾಯಭಾರಿ ದೇಶ ಬಿಡುವ ಚಿಂತನೆ; ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
ಇಟಲಿ ರಾಯಭಾರಿ ದೇಶ ಬಿಡುವ ಚಿಂತನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ನವದೆಹಲಿ: ಇಟಲಿ ರಾಯಭಾರಿ ದೇಶ ಬಿಡುವ ಚಿಂತನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಮೀನುಗಾರರ ಹತ್ಯೆ ಪ್ರಕರಣ ಸಂಬಂಧ ಸರ್ಕಾರದಿಂದ ಒತ್ತಡಕ್ಕೆ ಗುರಿಯಾಗಿರುವ ಇಟಲಿ ರಾಯಭಾರಿ ಡೇನಿಯಲ್ ಮ್ಯಾನ್ಸಿನಿ ದೇಶ ಬಿಡುವ ಆಲೋಚನೆ ಮಾಡುತ್ತಿದ್ದಾರೆ. ಈಗಾಗಲೇ ಅವರು ಪ್ರಯಾಣದ ಸಿದ್ದತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಎಲ್ಲ ವಿಮಾನ ನಿಲ್ದಾಣಗಳಿಗೆ ಸಂದೇಶ ರವಾನಿಸಿದೆ. 'ಇಟಲಿ ರಾಯಭಾರಿಗೆ ದಿಗ್ಭಂಧನ ವಿಧಿಸಲಾಗಿದ್ದು, ಆತ ಹೊರ ದೇಶಕ್ಕೆ ತೆರಳಲು ಅವಕಾಶ ನೀಡಬಾರದು' ಎಂದು ಸಂದೇಶ ರವಾನಿಸಲಾಗಿದೆ. ಪ್ರಕರಣ ಕುರಿತು ಸುಪ್ರೀಂಕೋರ್ಟ್ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ರಾಯಭಾರಿ ಡೇನಿಯಲ್ ನ್ಯಾಯಾಲಯದ ಅನುಮತಿ ಪಡೆಯದೇ ದೇಶ ಬಿಡುವಂತಿಲ್ಲ.
ಕೇರಳದಲ್ಲಿ ನಡೆದ ಮೀನುಗಾರರ ಹತ್ಯೆ ಪ್ರಕರಣ ಉಭಯ ದೇಶಗಳ ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡಿದೆ. ಇದೀಗ ಇಟಲಿ ರಾಯಭಾರಿಗೆ ದಿಗ್ಭಂಧನ ವಿಧಿಸಿರುವುದರಿಂದ ಇಟಲಿಯೊಂದಿಗಿನ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ.