ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೊಹಾಲಿ ಟೆಸ್ಟ್: 2ನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 273/7

ಭಾರತದ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2ನೇ ದಿನದಂತ್ಯಕ್ಕೆ 273ರನ್ ಗಳಿಸಿ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ.

Srinivasa Murthy VN
Updated On : 15 Mar 2013, 6:16 am

ಮೊಹಾಲಿ: ಭಾರತದ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2ನೇ ದಿನದಂತ್ಯಕ್ಕೆ 273ರನ್ ಗಳಿಸಿ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ನಿನ್ನೆ ಆರಂಭವಾಗಬೇಕಿದ್ದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯ ಮಳೆಯಿಂದಾಗಿ ಇಂದು ಆರಂಭಗೊಂಡಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ಆರಂಭಿಕ ಆಟಗಾರರಾದ ಕೋವನ್ ಮತ್ತು ಡೇವಿಡ್ ವಾರ್ನರ್ ಜೋಡಿ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ನೀಡಿತು. 139ರನ್‌ಗಳನ್ನು ಕಲೆಹಾಕಿದ ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದರು.

ನಂತರ ಬಂದ ಮೈಕಲ್ ಕ್ಲಾರ್ಕ್ ಶೂನ್ಯ ಸಂಪಾದನೆ ಮಾಡಿ ಪೆವಿಲಿಯನ್ ದಾರಿ ಹಿಡಿದರು. ಕ್ಲಾರ್ಕ್ ನಂತರ ಬಂದ ಹ್ಯೂಗ್ಸ್ ಕೂಡ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲದೇ ಕೇವಲ 2 ರನ್‌ಗಳಿಸಿ ಓಜಾಗೆ ವಿಕೆಟ್ ಒಪ್ಪಿಸಿದರು. ಇದ್ದಕ್ಕಿದಂತೆ ಕುಸಿತ ಕಂಡ ಆಸ್ಟ್ರೇಲಿಯಾಗೆ ಸ್ಮಿತ್ ಮತ್ತು ಹಡ್ಡಿನ್ ಜೋಡಿ ನೆರವಾಯಿತು. ಹಡ್ಡಿನ್ ತಮ್ಮ ರನ್ ಗಳಿಕೆಯನ್ನು 21ಕ್ಕೇ ಸೀಮಿತಗೊಳಿಸಿ ಇಶಾಂತ್ ಶರ್ಮಾ ಅವರಿಗೆ ಕ್ಲೀನ್ ಬೋಲ್ಡ್ ಆದರು. ದಿನದಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿರುವ ಹಡ್ಡಿನ್ ಮತ್ತು ಸ್ಟಾರ್ಕ್ ಜೋಡಿ ನಾಳೆ ಆಟವನ್ನು ಮುಂದುವರೆಸಲಿದೆ.

ಒಟ್ಟಾರೆ 3ನೇ ಟೆಸ್ಟ್‌ನ 2ನೇ ದಿನದಾಟದಲ್ಲಿ ಭಾರತ ತನ್ನ ಸ್ಪಿನ್ನರ್‌ಗಳ ನೆರವಿನಿಂದಾಗಿ ಮೇಲುಗೈ ಸಾಧಿಸಿದೆ. ಭಾರತದ ಪರ ಇಶಾಂತ್ ಶರ್ಮಾ 2 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 3 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎಂದೆನಿಸಿಕೊಂಡರು. ಉಳಿದಂತೆ ಅಶ್ವಿನ್ ಮತ್ತು ಒಜಾ ತಲಾ ಒಂದು ವಿಕೆಟ್ ಪಡೆದರು. ಸಂಕಷ್ಟಕ್ಕೆ ಸಿಲುಕಿರುವ ಆಸ್ಟ್ರೇಲಿಯಾ 273ರನ್‌ಗಳಿಗೆ 7ವಿಕೆಟ್ ಕಳೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement