ಗಂಗಾ ನದಿಯಲ್ಲಿ ಬೋಟ್ ಮುಳುಗಡೆ
ಪಶ್ಚಿಮ ಬಂಗಾಳದಲ್ಲಿ ಪ್ರಯಾಣಿಕರ ಬೋಟ್ವೊಂದು ಮುಳುಗಡೆಯಾಗಿದೆ.
ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಯಾಣಿಕರ ಬೋಟ್ವೊಂದು ಮುಳುಗಡೆಯಾಗಿದೆ.
ಪಶ್ಚಿಮ ಬಂಗಾಳದ ಹೌರಾದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಧಾವಿಸಿದೆ. ಈಗಾಗಲೇ ಈಜು ತಜ್ಞರು ಕಾರ್ಯ ಪ್ರವೃತ್ತರಾಗಿದ್ದು 20 ಮಂದಿ ಪ್ರಯಾಣಿಕರನ್ನು ನೀರಿನಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹ ಪ್ರಯಾಣಿಕರು ನೀಡಿರುವ ಮಾಹಿತಿಯಂತೆ ನೀರಿನಲ್ಲಿ ಇನ್ನೂ ಐದಾರು ಮಂದಿ ಮುಳುಗಿರುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಲ್ಲಿ ಸಾವಿಗೀಡಾದವರ ಕುರಿತು ವರಿದಿಯಾಗಿಲ್ಲ.
ಕಳೆದ ಶುಕ್ರವಾರದಂದು ಜಾರ್ಖಂಡ್ನಿಂದ ರಘುನಾಥಪುರಕ್ಕೆ ಪ್ರಯಾಣ ಆರಂಭಿಸಿದ್ದ ಬೋಟ್, ಇಂದು ಅಪಘಾತಕ್ಕೀಡಾಗಿ ಮುಳುಗಡೆಯಾಗಿದೆ. ಬೋಟ್ ಮುಳುಗುವುದಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಕರಾವಳಿ ರಕ್ಷಣಾ ಪಡೆ ತನಿಖೆ ಆರಂಭಿಸಿದೆ.