ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೊಹಾಲಿ ಟೆಸ್ಟ್: ಭಾರತಕ್ಕೆ 91 ರನ್ ಮುನ್ನಡೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 91 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

Srinivasa Murthy VN
Updated On : 17 Mar 2013, 4:11 am

ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 91 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ 408 ರನ್ ಗಳಿಗೆ ಉತ್ತರವಾಗಿ ಭಾರತ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 499 ರನ್‌ಗಳಿಸಿದೆ. ಅಲ್ಲದೆ ಭಾರತ ತಂಡ ಒಟ್ಟು 91 ರನ್ ಗಳ ಮುನ್ನಡೆ ಪಡೆದುಕೊಂಡಿದೆ.

ಇಂದು 283 ರನ್ ಗಳೊಂದಿಗೆ ದಿನದ ಆಟ ಆರಂಭಿಸಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಿನ್ನೆ ದಾಖಲೆಯ ಶತಕ ಸಿಡಿಸಿದ್ದ ಶಿಖರ್ ಧವನ್, ಆರಂಭದಲ್ಲಿಯೇ ಲೈಆನ್ ಬೌಲಿಂಗ್ ನಲ್ಲಿ ಕೋವನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರ ಹಿಂದೆಯೇ ಚೇತೇಶ್ವರ್ ಪೂಜಾರ ಕೂಡ ಎಲ್ ಬಿ ಬಲೆಗೆ ಬಿದ್ದರು. ನಂತರ ಬಂದ ಸಚಿನ್ ಕೊಂಚ ಹೊತ್ತು ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲು ಯತ್ನಿಸಿದರು. ಅವರ ಮೊತ್ತ ಕೂಡ 37ಕ್ಕೇ ಸೀಮಿತವಾಯಿತು.

ನಂತರ ಮುರಳಿ ವಿಜಯ್ ಕೂಡ ಮಿಚೆಲ್ ಸ್ಟಾರ್ಕ್‌ಗೆ ತಮ್ಮ ವಿಕೆಟ್ ಒಪ್ಪಿಸಿದರು. ಕೊಹ್ಲಿಯನ್ನು ಹೊರತು ಪಡಿಸಿ ನಂತರ ಬಂದ ಯಾವೊಬ್ಬ ಆಟಗಾರ ಕೂಡ ಕ್ರೀಸ್‌ನಲ್ಲಿ ನಿಂತು ರನ್ ಗಳಿಸುವಲ್ಲಿ ವಿಫಲರಾದರು. ಒಟ್ಟಾರೆ ಭಾರತ 499 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟೇಲಿಯಾ ಪೀಟರ್ ಸಿಡ್ಲ್ ಆಕರ್ಷಕ ಬೌಲಿಂಗ್ ಮೂಲಕ ಭಾರತ ದಿಢೀರ್ ಕುಸಿತಕ್ಕೆ ಕಾರಣವಾದರು. ಇದೀಗ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ 36 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದೆ.

ಭರ್ಜರಿ ಬೌಲಿಂಗ್ ಪ್ರದರ್ಶಿಸುತ್ತಿರುವ ಭಾರತದ ಭುವನೇಶ್ವರ್ ಕುಮಾರ್ ಆಕ್ರಮಣಕಾರಿ ಆಟಗಾರ ಡೇವಿಡ್ ವಾರ್ನರ್ ಮತ್ತು ಕೋವನ್ ಅವರ ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ವರದಿ ಬಂದಾಗ 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡ 36 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement