ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಟ ರಣಬೀರ್ ಕಪೂರ್ ಗೆ 60 ಸಾವಿರ ದಂಡ

ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು 60 ಸಾವಿರ ರು.ದಂಡ ವಿಧಿಸಿದ್ದಾರೆ.

Srinivasa Murthy VN
Updated On : 4 May 2013, 5:50 am

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು 60 ಸಾವಿರ ರು.ದಂಡ ವಿಧಿಸಿದ್ದಾರೆ.

ನಟ ರಣ್ ಬೀರ್ ಅವರು ವಿದೇಶದಲ್ಲಿ ಖರೀದಿಸಿದ ಕೆಲ ವಸ್ತುಗಳಿಗೆ ತೆರಿಗೆ ನೀಡದೆ ಭಾರತಕ್ಕೆ ತಂದಿರುವುದನ್ನು ಪತ್ತೆ ಹಚ್ಚಿದ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅವರಿಗೆ 60 ಸಾವಿರು ರು.ದಂಡ ವಿಧಿಸಿದ್ದಾರೆ.

ಲಂಡನ್ ಗೆ ಚಿತ್ರೀಕರಣಕ್ಕೆ ತೆರಳಿದ್ದ ನಟ ರಣಬೀರ್ ಕಪೂರ್ ಅವರು, ಇಂದು ಮಧ್ಯಾಹ್ನದ ಸುಮಾರಿಗೆ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಲಂಡನ್ನಲ್ಲಿ ಖರೀದಿಸಿದ್ದ ಸೆಂಟ್, ಬಟ್ಟೆಗಳು ಮತ್ತು ಇತರೆ ವಸ್ತುಗಳನ್ನು ತಂದಿದ್ದ ಅವರು, ಅದನ್ನು ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ನಿಲ್ದಾಣದಲ್ಲಿ ಲಗೇಜ್ ಪಡೆಯುವ ವೇಳೆ ಈ ವಸ್ತುಗಳನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು, ಒಟ್ಟು 1 ಲಕ್ಷ ಮೌಲ್ಯದ ವಸ್ತುಗಳನ್ನು ಅವರಿಂದ ವಶಪಡಿಸಿಕೊಂಡಿದ್ದರು.

ಅಲ್ಲದೆ ಸುಮಾರು 40 ನಿಮಿಷಗಳ ಕಾಲ ರಣಬೀರ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, 60 ಸಾವಿರ ರು.ಗಳ ದಂಡ ವಸೂಲಿ ಮಾಡಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರೀಕರಣಕ್ಕಾಗಿ ಪದೇ ಪದೇ ವಿದೇಶಕ್ಕೆ ತೆರಳುವ ಬಾಲಿವುಡ್ ಮಂದಿಗೆ ವಿಮಾನ ನಿಲ್ದಾಣದ ನಿಯಮಾವಳಿಗಳನ್ನು ಪಾಲಿಸಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲವೇ...?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement