ಬೆಂಗಳೂರಿನಲ್ಲಿ ಮತದಾನ ಬಹಿಷ್ಕಾರ, ರಾಯಚೂರಿನಲ್ಲಿ ಮತ ಯಂತ್ರ ಧ್ವಂಸ
ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಮತದಾರರು ಮತದಾನ ಬಹಿಷ್ಕರಿಸಿದ್ದು, ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮತಯಂತ್ರವನ್ನೇ ಧ್ವಂಸಗೊಳಿಸಿದ್ದಾನೆ.
ಬೆಂಗಳೂರು: ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಮತದಾರರು ಮತದಾನ ಬಹಿಷ್ಕರಿಸಿದ್ದು, ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮತಯಂತ್ರವನ್ನೇ ಧ್ವಂಸಗೊಳಿಸಿದ್ದಾನೆ.
ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಂಗಳೂರಿನ ಸಿ.ವಿ.ರಾಮನ್ ನಗರದ ವಾರ್ಡ್ ನಂಬರ್ 68 ಮತ್ತು 79ರಲ್ಲಿ ಮತದಾರರು ಮತದಾನವನ್ನೇ ಬಹಿಷ್ಕರಿಸಿದ್ದಾರೆ.
ಅಂತೆಯೇ ರಾಯಚೂರಿನ ಲಿಂಗಸುಗೂರಿನ ತೂರಡಗಿ ಗ್ರಾಮದಲ್ಲಿ ನಡೆಯುತ್ತಿದ್ದ ಮತದಾನದ ವೇಳೆ ಮತದಾರನೊಬ್ಬ ಮತಯಂತ್ರವನ್ನೇ ಧ್ವಂಸಗೊಳಿಸಿದ್ದಾನೆ. ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯವಿಲ್ಲ ಎಂದು ಆರೋಪಿಸಿದ್ದ ಸೋಮಲಿಂಗ ಎಂಬ ವ್ಯಕ್ತಿ ಮತ ಯಂತ್ರವನ್ನೇ ಧ್ವಂಸಗೊಳಿಸಿದ್ದಾನೆ. ಇದರಿಂದಾಗಿ ತೂರಡಗಿ ಮತಗಟ್ಟೆಯಲ್ಲಿ ಕೆಲಹೊತ್ತು ಮತದಾನ ಸ್ಥಗಿತಗೊಂಡಿತ್ತು. ಸೋಮಲಿಂಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.