ಮತದಾನ ಮುಕ್ತಾಯ: ಶೇ.66.81 ರಷ್ಟು ಮತದಾನ
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ರಾಜ್ಯಾದ್ಯಂತ ಶೇಕಡಾ 66.81ರಷ್ಟು ಮತದಾನವಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಸಂಜೆ 6 ಗಂಟೆಯವರೆಗೂ ನಡೆದ ಮತದಾನದಲ್ಲಿ ರಾಜ್ಯಾದ್ಯಂತ ಶೇಕಡಾ 66.81ರಷ್ಟು ಮತದಾನವಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಕೆಲವು ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ನೆರವೇರಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ ಸಂಜೆ 6 ಗಂಟೆಯ ವರೆಗೂ ನಡೆದ ಮತದಾನದಲ್ಲಿ ರಾಜ್ಯಾದ್ಯಂತ ಶೇಕಡಾ 66.81ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾವಾರು ಮತದಾನ ಪ್ರಮಾಣ ಹೀಗಿದೆ
ಕೋಲಾರ 69.5, ಯಾದಗಿರಿ 62, ದಾವಣಗೆರೆ 65, ರಾಯಚೂರು 56, ಚಾಮರಾಜ ನಗರ 74, ಹಾವೇರಿ 73, ಬಾಗಲಕೋಟೆ 71, ಚಿತ್ರದುರ್ಗ 62, ಬೆಂಗಳೂರು ನಗರ 55, ಬೆಂಗಳೂರು ಗ್ರಾಮಾಂತರ 65, ರಾಮನಗರ 69.93, ಶಿವಮೊಗ್ಗ 70, ಮಂಡ್ಯ 68, ಉತ್ತರ ಕನ್ನಡ 69, ಕೊಡಗು 63.5, ಚಿಕ್ಕಮಗಳೂರು 65, ಧಾರವಾಡ 64, ಹಾಸನ 68, ಮೈಸೂರು 62, ಮಂಗಳೂರು 75, ಚಿಕ್ಕಬಳ್ಳಾಪುರ 70, ಗುಲ್ಬರ್ಗಾ 50, ತುಮಕೂರು 60, ಉಡುಪಿ 75, ಬಿಜಾಪುರ ಜಿಲ್ಲೆಯಲ್ಲಿ ಶೇಕಡಾ 64ರಷ್ಟು ಮತದಾನವಾಗಿದೆ.