ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ಕೈದಿ ಸಾವು: ಪಾರ್ಥೀವ ಶರೀರ ಪಾಕ್‌ಗೆ ರವಾನೆ

Srinivasa Murthy VN
Updated On : 9 May 2013, 7:50 am

ನವದೆಹಲಿ: ಜಮ್ಮುವಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿ ಮೃತನಾಗಿದ್ದ ಪಾಕಿಸ್ತಾನ ಮೂಲದ ಕೈದಿ ಸನಾವುಲ್ಲಾ ರಂಜಯ್ ಅವರ ಪಾರ್ಥೀವ ಶರೀರರವನ್ನು ಅವರ ಸ್ವದೇಶಕ್ಕೆ ರವಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಚಂಡೀಗಡದ ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಆಸ್ಪತ್ರೆಯಲ್ಲಿರುವ ಸನಾವುಲ್ಲಾ ಅವರ ಮೃತ ದೇಹವನ್ನು ವಿಶೇಷ ವಿಮಾನದ ಮೂಲಕ ಪಾಕಿಸ್ತಾನಕ್ಕೆ ರವಾನೆ ಮಾಡಲಾಗುತ್ತದೆ. ಅಂತೆಯೇ ಜೈಲಿನಲ್ಲಿದ್ದಾಗ ಸನಾವುಲ್ಲಾ ದಿನನಿತ್ಯ ಓದುತ್ತಿದ್ದ ಖುರಾನ್ ಪುಸ್ತಕವನ್ನೂ ಸಹ ಮೃತದೇಹದೊಂದಿಗೆ ರವಾನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಉಭಯ ದೇಶಗಳ ರಾಯಭಾರ ಕಚೇರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಇಲಾಖೆಯ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ಅವರು, ಸನಾವುಲ್ಲಾ ಅವರ ಆರೋಗ್ಯದ ಕುರಿತು ಭಾರತ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ವಹಿಸಿತ್ತು. ಆದರೆ ದುರದೃಷ್ಟವಶಾತ್ ಅವರು ಮೃತಪಟ್ಟಿದ್ದಾರೆ. ಆದರೆ ಅವರ ಮೃತ ದೇಹಕ್ಕಾಗಿ ಪಾಕಿಸ್ತಾನ ಮನವಿ ಮಾಡಿದರೆ, ಖಂಡಿತವಾಗಿಯೂ ನಾವು ಅವರಿಗೆ ಸಹಾಯ ಮಾಡುತ್ತೇವೆ. ಮೃತ ದೇಹವನ್ನು ಸ್ವದೇಶಕ್ಕೆ ರವಾನಿಸಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಘಟನೆ ಸಂಭವಿಸಿದ ದಿನದಿಂದ ಇಂದಿನವರೆಗೂ ಪಾಕ್ ವಿದೇಶಾಂಗ ಇಲಾಖೆ ಮತ್ತು ಪಾಕಿಸ್ತಾನ ರಾಯಭಾರಿಗಳು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರಿಗೆ ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಕಳೆದ ಮೇ 3ರಂದು ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕ್ ಮೂಲದ ಕೈದಿ ಸನಾವುಲ್ಲಾನನ್ನು ಚಂಡೀಗಡದ ವೈದ್ಯಕೀಯ ಶಿಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತ 7 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸನಾವುಲ್ಲಾ ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement