ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜಿನಾಮೆ ಹೈಕಮಾಂಡ್ ನಿರ್ಧಾರವಾಗಿತ್ತು: ಕಾಂಗ್ರೆಸ್

Srinivasa Murthy VN
Updated On : 12 May 2013, 6:15 am

ನವದೆಹಲಿ: ರೇಲ್ವೆ ಮತ್ತು ಕಾನೂನು ಸಚಿವರ ರಾಜಿನಾಮೆ ವಿಚಾರ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರ ಜಂಟಿ ನಿರ್ಧಾರವಾಗಿತ್ತು ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.

ಬಡ್ತಿಗಾಗಿ ಲಂಚಪಡೆದ ಪ್ರಕರಣ ಮತ್ತು ಸಿಬಿಐ ವರದಿ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಪಿ.ಕೆ.ಬನ್ಸಾಲ್ ಮತ್ತು ಅಶ್ವನಿ ಕುಮಾರ್ ಅವರ ರಾಜಿನಾಮೆ ವಿಚಾರ ಪಕ್ಷದ ತೀರ್ಮಾನವಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಜಂಟಿಯಾಗಿ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಜನಾರ್ಧನ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವರ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಭಿನ್ನಮತ ಉಂಟಾಗಿತ್ತು. ಪ್ರಧಾನಿ ಸಿಂಗ್ ಮತ್ತು ಸೋನಿಯಾಗಾಂಧಿ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೊಹಕ್ಕೆ ತೆರೆಎಳೆದಿದ್ದಾರೆ. 'ಇದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ಅಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆದಿಲ್ಲ ಮತ್ತು ನಡೆಯುವುದಿಲ್ಲ. ರಾಜಿನಾಮೆ ನಿರ್ಧಾರ ಉಭಯ ನಾಯಕರ ಒಮ್ಮತದ ತೀರ್ಮಾನವಾಗಿತ್ತು' ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಆಂಗ್ಲ ದೈನಿಕವೊಂದು ನಿನ್ನೆ ಪ್ರಕಟಿಸಿದ್ದ ವರದಿಯಲ್ಲಿ, ಉಭಯ ಸಚಿವರ ರಾಜಿನಾಮೆಗೆ ಸೋನಿಯಾ ಗಾಂಧಿ ಅವರ ವಿರೋಧವಿತ್ತು. ಕೇವಲ ಪ್ರಧಾನಿ ಮನಮೋಹನ್ ಸಿಂಗ್ ಅವರ ಒತ್ತಾಯಕ್ಕೆ ಮಣಿದು ಉಭಯ ಸಚಿವರು ರಾಜಿನಾಮೆ ನೀಡಿದ್ದರು. ಅಲ್ಲದೆ ರಾಜಿನಾಮೆ ವಿಚಾರದ ಕುರಿತು ಸಿಂಗ್ ಮತ್ತು ಸೋನಿಯಾ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಪತ್ರಿಕೆ ವರದಿ ಪ್ರಕಟಿಸಿತ್ತು. ಪತ್ರಿಕೆಯ ವರದಿಯ ತಿರುಳನ್ನು ಅಲ್ಲಗಳೆದಿರುವ ಕಾಂಗ್ರೆಸ್ ಮೂಲಗಳು, ರಾಜಿನಾಮೆ ನಿರ್ಧಾರ ಸೋನಿಯಾ ಮತ್ತು ಪ್ರಧಾನಿ ಸಿಂಗ್ ಅವರ ಜಂಟಿ ನಿರ್ಧಾರವಾಗಿದೆ ಎಂದು ಸ್ಪಷ್ಟಪಡಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement