28 ಸಚಿವರಿಗೆ ಖಾತೆ ಹಂಚಿಕೆ: ರಾಜ್ಯಪಾಲರ ಅಂಕಿತ
28 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಖಾತೆ ಹಂಚಿಕೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂಕಿತ ಹಾಕಿದ್ದಾರೆ.
ಬೆಂಗಳೂರು: ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ 28 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಖಾತೆ ಹಂಚಿಕೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂಕಿತ ಕೂಡ ಹಾಕಿದ್ದಾರೆ.
ರಾಜಭವನದಲ್ಲಿ ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಲ್ಲ 28 ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಖಾತೆ ಹಂಚಿಕೆ ಮಾಡಲಾಗಿದೆ.
ಸಚಿವರ ಖಾತೆ ಹಂಚಿಕೆ ವಿವರ ಈ ಕೆಳಗಿನಂತಿದೆ.
ಹೆಚ್.ಆಂಜನೇಯ-ಸಮಾದ ಕಲ್ಯಾಣ
ಶಿವರಾಜ್ ತಂಗಡಗಿ-ಸಣ್ಣ ನಿರಾವರಿ
ಕೆ.ಜೆ.ಜಾರ್ಜ್-ಗೃಹ ಇಲಾಖೆ
ಶರಣ ಪ್ರಕಾಶ ಪಾಟೀಲ್-ವೈದ್ಯಕೀಯ ಶಿಕ್ಷಣ
ಅಂಬರೀಶ್-ವಸತಿ
ಸತೀಶ್ ಜಾರಕಿಹೊಳಿ-ಅಬಕಾರಿ
ಆರ್.ವಿ.ದೇಶಪಾಂಡೆ-ಉನ್ನತ ಶಿಕ್ಷಣ ಮತ್ತು ಪ್ರವಾಸೋಧ್ಯಮ
ಉಮಾಶ್ರಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸೃತಿ ಇಲಾಖೆ
ಶ್ರೀನಿವಾಸ್ ಪ್ರಸಾದ್-ಕಂದಾಯ
ಕೃಷ್ಣ ಬೈರೇಗೌಡ-ಕೃಷಿ
ರಮಾನಾಥ್ ರೈ-ಅರಣ್ಯ
ಕಿಮೆನೆ ರತ್ನಾಕರ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ಅಭಯ್ ಚಂದ್ರ ಜೈನ್-ಮೀನುಗಾರಿಕೆ ಮತ್ತು ಬಂದರು, ಯುವ ಜನ ಸೇವೆ
ಸಂತೋಷ್ ಲಾಡ್-ಮಾಹಿತಿ ಮತ್ತು ಮೂಲಸೌಕರ್ಯ
ಯುಟಿ ಖಾದರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಶ್ಯಾಮನೂರು ಶಿವಶಂಕರಪ್ಪ-ತೋಟಗಾರಿಕೆ ಮತ್ತು ಎಪಿಎಂಸಿ
ಖಮರುಲ್ ಇಸ್ಲಾಂ-ವಕ್ಫ್ ಮತ್ತು ಪೌರಾಡಳಿತ
ಪ್ರಕಾಶ್ ಹುಕ್ಕೇರಿ-ಮುಜರಾಯಿ ಮತ್ತು ರೇಷ್ಮೆ
ಹೆಚ್.ಸಿ.ಮಹದೇವ್ ಪ್ರಸಾದ್-ಲೋಕೋಪಯೋಗಿ
ರಾಮಲಿಂಗಾ ರೆಡ್ಡಿ-ಸಾರಿಗೆ
ಹೆ.ಕೆ.ಪಾಟೀಲ್-ಗ್ರಾಮೀಣಾವೃದ್ದಿ ಮತ್ತು ಪಂಚಾಯತ್ ರಾಜ್
ಮಹದೇವ ಪ್ರಸಾದ್-ಸಹಕಾರ
ಎಂ.ಬಿ.ಪಾಟೀಲ್-ಜಲಸಂಪನ್ಮೂಲ
ಶರಣ ಪ್ರಕಾಶ್ ಪಾಟೀಲ್-ವೈಧ್ಯಕೀಯ ಶಿಕ್ಷಣ
ಬಾಬುರಾವ್ ಚಿಂಚನಸೂರ್-ಜವಳಿ ಮತ್ತು ಕ್ರೀಡೆ
ಟಿಬಿ ಜಯಚಂದ್ರ-ಕಾನೂನು ಮತ್ತು ಸಂಸದೀಯ ಇಲಾಖೆ, ಪಶುಸಂಗೋಪನೆ
ದಿನೇಶ್ ಗುಂಡೂರಾವ್-ಆಹಾರ ಖಾತೆ