ಸಿಇಟಿ ಫಲಿತಾಂಶ ಪ್ರಕಟ
ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದರು.
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಫಲಿತಾಂಶವನ್ನು ಮಂಗಳವಾರ ಸಂಜೆ ಪ್ರಕಟಿಸಿದರು.
12ನೇ ತರಗತಿಯ ವಿವಿಧ ವಿಭಾಗಗಳ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಬೆಂಗಳೂರಿನ ವೈಧ್ಯಕೀಯ ವಿಭಾಗ ವಿದ್ಯಾರ್ಥಿ ಹೇಮಂತ್ ಅಮರ್‌ದೀಪ್ ಸಂತು ಎಂಬ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದಿದ್ದು, ಮೇಧಾ ನಾರಾಯಣ ಎಂಬ ವಿದ್ಯಾರ್ಥಿನಿ 2ನೇ ಸ್ಥಾನ ಗಳಿಸಿದ್ದಾಳೆ. ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಜ್ವಲ್ ಕೆ.ಎ.ಪ್ರಥಮ ಸ್ಥಾನಗಳಿಸಿದ್ದು, ಸುಜೀತ್ ಎಸ್ ಕುಂಜನ್ ಎಂಬ ವಿದ್ಯಾರ್ಥಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಬಾರಿಯ ಪರೀಕ್ಷೆಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶ ಉತ್ತಮವಾಗಿದ್ದು, ಕಳೆದ ಬಾರಿಗಿಂತ ಶೇ.25ರಷ್ಟು ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಾಧ್ಯಂತ ಒಟ್ಟು 1.39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 99.066 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ಮೇ 1ರಿಂದ ಆರಂಭಗೊಂಡಿದ್ದ ಪ್ರವೇಶ ಪರೀಕ್ಷೆ ಮೇ 10ರಂದು ಮುಕ್ತಾಯವಾಗಿತ್ತು. ಬೆಂಗಳೂರಿನ 69 ಪರೀಕ್ಷಾ ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 287 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 1.39 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸಿಇಟಿ ಪರೀಕ್ಷಾ ಸಂಪೂರ್ಣ ಫಲಿತಾಂಶ ಈ ಕೆಳಕಂಡ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ.
HTTP://KARRESULTS.NIC.IN
HTTP://KEA.KAR.NIC.IN
HTTP://CET.KAR.NIC.IN