ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಪಾಟ್ ಫಿಕ್ಸಿಂಗ್: ಅಂಕಿತ್ ಚೌವ್ಹಾಣ್‌ಗೆ ಜಾಮೀನು

ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಕ್ರಿಕೆಟಿಗ ಅಂಕಿತ್ ಚೌವ್ಹಾಣ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

Srinivasa Murthy VN
Updated On : 30 May 2013, 5:36 am

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಪಾಲ್ಗೊಂಡು ದೆಹಲಿ ಪೊಲೀಸರಿಂದ ಬಂಧನಕ್ಕೀಡಾಗಿದ್ದ ಕ್ರಿಕೆಟಿಗ ಅಂಕಿತ್ ಚೌವ್ಹಾಣ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಇದೇ ಜೂನ್ 2 ರಂದು ಅಂಕಿತ್ ಚೌವ್ಹಾಣ್ ಅವರ ವಿವಾಹ ನಿಶ್ಚಯವಾಗಿರುವರಿಂದ, ದೆಹಲಿಯ ಸಾಕೇತ್ ಕೋರ್ಟ್ ಅಂಕಿತ್ ಅವರಿಗೆ ಷರತ್ತು ಬದ್ದ ಮಧ್ಯಂತರ ಜಾಮೀನು ನೀಡಿದೆ. ಅಂಕಿತ್ ನಾಳೆ ಬಿಡುಗಡೆಯಾಗಲಿದ್ದು, ಮದುವೆ ಸಮಾರಂಭ ಮುಗಿಸಿಕೊಂಡು ಜೂನ್ 6 ರಂದೇ ಮತ್ತೆ ನ್ಯಾಯಾಲಯಕ್ಕೆ ಶರಣಾಗಬೇಕಿದೆ.

ಅಂಕಿತ್ ಪರ ವಾದ ಮಂಡಿಸಿದ ವಕೀಲರು, ಅಂಕಿತ್ ಅವರನ್ನು ದೆಹಲಿ ಪೊಲೀಸರು ಬಂಧಿಸುವ ಮುನ್ನವೇ ಅವರ ವಿವಾಹ ನಿಶ್ಚಯವಾಗಿತ್ತು. ಅಲ್ಲದೆ ವಿವಾಹದ ಆಮಂತ್ರಣ ಪತ್ರಿಕೆಗಳನ್ನು ಕೂಡ ಹಂಚಲಾಗಿತ್ತು. ಇಂತಹ ಸಂದರ್ಭದಲ್ಲಿ ಅಂಕಿತ್ ವಿವಾಹ ರದ್ದಾದರೆ ಎರಡು ಕುಟುಂಬಳ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ತಮ್ಮ ವಾದವನ್ನು ಮಂಡಿಸಿದರು. ಅಂಕಿತ್ ಪರ ವಕೀಲರ ವಾದವನ್ನು ಅಂಗೀಕರಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಕ್ರಿಕೆಟಿಗ ಅಂಕಿತ್ ಚೌವ್ಹಾಣ್ ಅವರ ಮದುವೆ ಈ ಹಿಂದೆಯೇ ನಿಶ್ಚಯವಾಗಿದ್ದು, ವಿವಾಹದ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಅಲ್ಲದೆ ಮದುವೆಯ ಆಮಂತ್ರಣ ಪತ್ರಿಕೆಗಳ ವಿತರಣೆ ಕೂಡ ಮುಗಿದಿತ್ತು. ಈ ನಡುವೆ ಅಂಕಿತ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಅತಿಥಿಯಾಗುವುದರೊಂದಿಗೆ ವಿವಾಹ ಬಹುತೇಕ ರದ್ದಾಗಿತ್ತು. ಆದರೆ ನ್ಯಾಯಾಲಯ ಅಂಕಿತ್‌ಗೆ ಜಾಮೀನು ನೀಡಿರುವುದರಿಂದ ವಿವಾಹಕ್ಕಿದ್ದ ತಡೆ ದೂರವಾದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement