ಭೂಮಿಯ ಸಮೀಪಕ್ಕೆ 1998 ಕ್ಯುಇ2
ಡೈನೋಸಾರ್ಗಳ ಅಳಿವಿಗೆ ಕಾರಣವಾದ ಕ್ಷುದ್ರಗ್ರಹವನ್ನು ಹೋಲುವ ಮತ್ತೊಂದು ಬೃಹತ್ ಕ್ಷುದ್ರಗ್ರಹವೊಂದು ಶುಕ್ರವಾರ ರಾತ್ರಿ...
ವಾಷಿಂಗ್ಟನ್: ಡೈನೋಸಾರ್ಗಳ ಅಳಿವಿಗೆ ಕಾರಣವಾದ ಕ್ಷುದ್ರಗ್ರಹವನ್ನು ಹೋಲುವ ಮತ್ತೊಂದು ಬೃಹತ್ ಕ್ಷುದ್ರಗ್ರಹವೊಂದು ಶುಕ್ರವಾರ ರಾತ್ರಿ ಭೂಮಿಯ ಕಕ್ಷೆಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕುಳಿದಿದ್ದ ಡೈನೋಸಾರ್ಗಳ ನಾಶಕ್ಕೆ ಕಾರಣವಾದ ಕ್ಷುದ್ರಗ್ರಹವನ್ನೇ ಹೋಲುವ ಮತ್ತೊಂದು ಬೃಹತ್ ಕ್ಷುದ್ರಗ್ರಹವೊಂದು ಇಂದು ರಾತ್ರಿ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಸುಮಾರು 1.7 ಮೈಲಿ ಗಾತ್ರ ಹೊಂದಿರುವ ಈ ಕ್ಷುದ್ರಗ್ರಹಕ್ಕೆ ವಿಜ್ಞಾನಿಗಳು 1998 ಕ್ಯುಇ2 ಎಂದು ಹೆಸರಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ 1998 ಕ್ಯುಇ2 ಕ್ಷುದ್ರಗ್ರಹವು ಶುಕ್ರವಾರ ಮಧ್ಯರಾತ್ರಿ ಸುಮಾರು 3.25ರ ಸಮಯದಲ್ಲಿ ಭೂಮಿಯ ಅತ್ಯಂತ ಸಮೀಪದಲ್ಲಿ ಹಾದುಹೋಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಚಿತ್ರ ಕೃಪೆ: ಸ್ಕೈ ನ್ಯೂಸ್